ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಲ್ಲಾಪೂರ ದ್ಯಾಮವ್ವದೇವಿ ಜಾತ್ರಾ ಉತ್ಸವ ಸರಳ

ಕುಂದಗೋಳ : ಇಲ್ಲೋಂದು ಊರಲ್ಲಿ ಅತಿ ಸರಳ ಮತ್ತು ಸಂಕ್ಷಿಪ್ತವಾಗಿ ಗ್ರಾಮದೇವಿಯ ಜಾತ್ರೆ ಮಾಡಿ ಗ್ರಾಮದ ಉದ್ಧಾರಕ್ಕಾಗಿ ಗ್ರಾಮಸ್ಥರು ತಾಯಿ ದ್ಯಾಮವ್ವದೇವಿಗೆ ಬೇಡಿಕೆ ಸಮರ್ಪಿಸಿದ್ದಾರೆ.

ಹೌದು ! ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಅಧಿದೇವತೆ ದ್ಯಾಮವ್ವದೇವಿ ಜಾತ್ರೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಗ್ರಾಮಸ್ಥರು ಕೊರೊನಾ ನಿಯಮ ಅನುಸರಿಸಿ ಅತಿ ಸರಳವಾಗಿ ಪೂಜಾಭಿಷೇಕ, ಹೋಮ, ಹವನ ಕಾರ್ಯಕ್ರಮ ನೆರವೇರಿಸಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದ ಏಳ್ಗೆ ಮಾಡುವಂತೆ ಪ್ರಾರ್ಥನೆ ಮಾಡಿದ್ದಾರೆ.

ಇನ್ನೂ ಜಾತ್ರಾ ಮಹೋತ್ಸವದಲ್ಲಿ ಡೊಳ್ಳಿನ ಮೆರವಣಿಗೆಯಲ್ಲಿ ಪಲ್ಲಕ್ಕಿ ಸೇವೆಯನ್ನು ಅತಿ ಸರಳವಾಗಿ ದೇವಸ್ಥಾನ ಸುತ್ತಲೂ ಸುತ್ತ ಹಾಕಿ, ದ್ಯಾಮವ್ವದೇವಿ ಮೆರವಣಿಗೆ ಮಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮ ನೆರವೇರಿಸಿ ಜಾತ್ರಾ ಪರಂಪರೆ ಮುಂದುವರೆಸಿದ್ದಾರೆ.

ಕಡಪಟ್ಟಿ ಅಲ್ಲಾಪೂರ ಅವಳಿ ಗ್ರಾಮಗಳು ರೈತಾಪಿ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಪುನೀತ ರಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

25/01/2022 04:30 pm

Cinque Terre

21.37 K

Cinque Terre

0

ಸಂಬಂಧಿತ ಸುದ್ದಿ