ಕುಂದಗೋಳ : ಸದಾ ಸಂಕಷ್ಟ ಚತುರ್ಥಿಗೆ ಒಂದಿಲ್ಲೊಂದು ವಿಶೇಷ ಪೂಜಾ ಕಾರ್ಯಕ್ರಮಗಳು ಮೂಲಕವೇ ಪ್ರಸಿದ್ಧಿ ಪಡೆದ ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದ ಬಲ್ಮೂರಿ ಗಣೇಶನಿಗೆ ಇಂದು ಸಂಕಷ್ಟಿ ಚತುರ್ಥಿ ನಿಮಿತ್ತವಾಗಿ ಕಿತ್ತಳೆ ಹಣ್ಣಿನ ಪೂಜೆ ಸಮರ್ಪಿಸಲಾಗಿದೆ.
ಬೆನಕನಹಳ್ಳಿ ಗ್ರಾಮ ಸೇರಿದಂತೆ ಕುಂದಗೋಳ ತಾಲೂಕಿನ ವಿವಿಧ ಹಳ್ಳಿಯ ಭಕ್ತರು ಆಗಮಿಸಿ ಬಲ್ಮೂರಿ ಗಣೇಶನ ದರ್ಶನ ಪಡೆಯುತ್ತಿದ್ದಾರೆ. ಬೆಳ್ಳಿ ಮುಖದ ಅಲಂಕಾರದಲ್ಲಿ ಕಿತ್ತಳೆ ಹಣ್ಣಿನ ಶೃಂಗಾರದಲ್ಲಿ ಗಣೇಶ್ ಭಕ್ತರಿಗೆ ದರ್ಶನ ನೀಡುತ್ತಿದ್ದು ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಪಾರ್ಥನೆ ಸಲ್ಲಿಸುತ್ತಿದ್ದಾರೆ.
Kshetra Samachara
22/01/2022 01:28 pm