ಧಾರವಾಡ: ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಮೂಗಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಈ ದೇವಸ್ಥಾನ ಐತಿಹಾಸಿಕ ಹಿನ್ನೆಲೆಯುಳ್ಳಂತ ದೇವಸ್ಥಾನವಾಗಿದೆ. ಮೂಗಬಸವೇಶ್ವರ ಹೆಬ್ಬಳ್ಳಿ ಗ್ರಾಮದ ಆರಾಧ್ಯ ದೈವವೂ ಹೌದು.
ದೇವಸ್ಥಾನ ಹಳೆಯದಾಗಿದ್ದರಿಂದ ಅದರ ಜೀರ್ಣೋದ್ಧಾರಕ್ಕೆ ಚಾಲನೆ ನೀಡಲಾಗಿದೆ. ಸದ್ಯ ದೇವಸ್ಥಾನವನ್ನು ತೆರವುಗೊಳಿಸಲಾಗಿದ್ದು, ಗರ್ಭಗುಡಿಯಲ್ಲಿದ್ದ ಬಸವಣ್ಣನ ಮೂರ್ತಿಯನ್ನೂ ಕ್ರೇನ್ ಸಹಾಯದಿಂದ ಬೇರೆ ಕಡೆ ಸ್ಥಳಾಂತರಿಸಲಾಗಿದೆ. ಮೂರ್ತಿ ಸ್ಥಳಾಂತರಿಸುವ ವೇಳೆ ಅದರ ಬುಡದಲ್ಲಿ ಕಲ್ಲಿನಲ್ಲಿದ್ದ ಮತ್ತೊಂದು ಬಸವಣ್ಣನ ಆಕೃತಿ ಕೂಡ ಪತ್ತೆಯಾಗಿ ಗ್ರಾಮಸ್ಥರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
Kshetra Samachara
19/01/2022 09:36 pm