ಕುಂದಗೋಳ : ಮುರುಘಾಮಠದ ಲಿಂಗೈಕ್ಯ ಮಠಾಧೀಶ ಶ್ರೀ ಮ.ನಿ.ಪ್ರ ಪರಮಪೂಜ್ಯ ಶಿವಯೋಗಿ ಮಹಾಸ್ವಾಮಿಗಳು ಭಕ್ತರನ್ನು ಅಗಲಿ ಇಂದಿಗೆ ಎರೆಡು ವರ್ಷ ಕಳೆದಿದ್ದರೂ, ಅವರ ಧಾರ್ಮಿಕ ಕಾರ್ಯಕ್ರಮ ಹಾಗೂ ಸಾಮಾಜಿಕ ಸೇವೆಗಳಿಂದ ಭಕ್ತರಲ್ಲಿ ಸದಾ ನೆಲೆಸಿದ್ದಾರೆ.
ರಾಜ್ಯದಲ್ಲೇ ಮುರಾಘಾಮಠವನ್ನು ಮಾದರಿಯನ್ನಾಗಿ ಮಾಡಿದ ಲಿಂಗೈಕ್ಯ ಮಠಾಧಿಪತಿಗಳ ಎರಡನೇ ಪುಣ್ಯ ಸ್ಮರಣೆ ಆರಾಧನೆ ಕಾರ್ಯಕ್ರಮವನ್ನು ಶ್ರೀಗಳ ಹುಟ್ಟೂರು ಪಶುಪತಿಹಾಳ ಗ್ರಾಮದಲ್ಲಿ ಅತಿ ಭಕ್ತಿ ಭಾವದಿಂದ ಆಚರಿಸಲಾಯಿತು.
ಪಶುಪತಿಹಾಳ ಗ್ರಾಮದ ಮಹಿಳೆಯರು, ಮಕ್ಕಳು, ನಾಗರೀಕರು ಸಂಕ್ರಮಣದ ಸಂಭ್ರಮದಲ್ಲಿ ಲಿಂಗೈಕ್ಯ ಮಠಾಧೀಶ ಶಿವಯೋಗಿ ಸ್ವಾಮಿಗಳು ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಿ ಹೂ, ಹಣ್ಣು, ಕಾಯಿ, ನೈವೈಧ್ಯ ಸಮರ್ಪಿಸಿ ಶ್ರೀಗಳ ಆರ್ಶಿವಾದಕ್ಕೆ ಪಾತ್ರರಾದರು.
ತೆರೆದ ಸಭಾ ಮಂಟಪದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಸಂಪೂರ್ಣ ಪಶುಪತಿಹಾಳ ಗ್ರಾಮದ ಜನತೆ ಪೂಜೆ ಸಲ್ಲಿಸಿ ಬಿಲ್ವ ಪತ್ರೆ ಸಮರ್ಪಿಸಿದರು, ಇನ್ನೂ ವಿಶೇಷವಾಗಿ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮದ ದಿನ ಭಜನಾ ಪದಗಳ ನಾದ ನಿನಾದ ಕೇಳಿ ಬಂದವು.
Kshetra Samachara
15/01/2022 02:32 pm