ಅಣ್ಣಿಗೇರಿ: ಪಟ್ಟಣ ಸಮೀಪದ ತ್ರಿವೇಣಿ ಸಂಗಮೇಶ್ವರ ಜಾತ್ರೆಯು ಇಂದು ಅದ್ದೂರಿಯಾಗಿ ನೆರವೇರಿತು. ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಜನರು ಬಂದಿದ್ದರು.
ಸರ್ಕಾರದ ಆದೇಶದಂತೆ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಜಾತ್ರೆಯನ್ನು ಅತಿ ಸರಳವಾಗಿ ಆಚರಿಸಲಾಯಿತು. ಪಟ್ಟಣದ ಜನಸ್ನೇಹಿ ಪೊಲೀಸ್ ಠಾಣೆಯ ಪಿ.ಎಸ್.ಐ. ಲಾಲ್ ಸಾಬ್ ಜೂಲಕಟ್ಟಿ ಅವರು ಜಾತ್ರೆಯಲ್ಲಿ ಕೋವಿಡ್ ನಿಯಮ ಪಾಲನೆಯಾಗುವಂತೆ ಕ್ರಮವಹಿಸಿದರು. ಅಷ್ಟೇ ಅಲ್ಲದೆ ರಥ ಎಳೆಯುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ರಥದ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಇನ್ನು ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಹಾಡುಗಳನ್ನು ಹಾಡಿ, ಅಭಿಷೇಕಗಳನ್ನು ಮಾಡುತ್ತಾ ಬೆಳಿಗ್ಗೆಯಿಂದಲೇ ಭಕ್ತಿಯಲ್ಲಿ ಮಿಂದೆದ್ದಿದ್ದರು.
Kshetra Samachara
14/01/2022 08:13 pm