ಕುಂದಗೋಳ : ಅಯ್ಯಪ್ಪಮಾಲಾಧಾರಿಗಳ ವಿಶೇಷತೆ, ಅವರ ಪೂಜಾ ಕಾರ್ಯಕ್ರಮಗಳು ಭಕ್ತಿ ಸಾಕ್ಷಾತ್ಕಾರದ ಪವಾಡಗಳಿಗೆ ಇಂದು ಕುಂದಗೋಳ ಪಟ್ಟಣದ ಅಂಬೇಡ್ಕರ್ ನಗರವು ಸಾಕ್ಷಿಯಾಗಿದೆ.
ಇಂದು ಕುಂದಗೋಳ ಪಟ್ಟಣದ ಅಂಬೇಡ್ಕರ್ ನಗರದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಶಬರಿಗೆ ಹೊರಡುವ ಮುನ್ನ, ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜಾಭಿಷೇಕ ಕಾರ್ಯಕ್ರಮ, ಪಡಿಪೂಜೆ, ಮಹಾಪೂಜೆ ಕಾರ್ಯಕ್ರಮ ನೆರವೇರಿಸಿ ಅನ್ನಸಂತರ್ಪಣೆ ಕಾರ್ಯಕ್ರಮ ಕೈಗೊಂಡರು.
ಬಳಿಕ ನೆರೆದ ಭಕ್ತರ ಸಮ್ಮುಖದಲ್ಲಿ ಭಕ್ತರ ಆರ್ಶಿವಾದ ಪಡೆದುಕೊಂಡು ಶಬರಿಮಲೆ ಯಾತ್ರೆ ಕೈಗೊಂಡರು ಈ ವೇಳೆ ಭಕ್ತಾಧಿಗಳು ಶುಭ ಯಾತ್ರಾ ಸಂದೇಶ ನೀಡಿ ತಮ್ಮ ಸೇವೆ ಸಲ್ಲಿಸಿದರು.
Kshetra Samachara
10/01/2022 08:55 pm