ವರದಿ: ಬಿ.ನಂದೀಶ
ಅಣಿಗೇರಿ; ಪಟ್ಟಣದ ದಾಸೋಹ ಮಠದ ಶ್ರೀ ಶಿವಕುಮಾರ ಸ್ವಾಮಿಗಳನ್ನು ಭಕ್ತರು ಅತಿ ಸಡಗರ-ಸಂಭ್ರಮದಿಂದ ಪಟ್ಟಣಕ್ಕೆ ಬರಮಾಡಿಕೊಂಡರು.ಕೆಲ ತಿಂಗಳುಗಳ ಹಿಂದೆ ಮಠದ ಕೆಲ ಟ್ರಸ್ಟಿಗಳ ವರ್ತನೆಗೆ ಬೇಸತ್ತು ಮಠವನ್ನು ತೊರೆದಿದ್ದರು. ಸ್ವಲ್ಪ ದಿನಗಳ ಕಾಲದವವರೆಗೆ ಕಾಶಿಯಲ್ಲಿ ಇದು ನಿನ್ನೆ ಬೆಂಗಳೂರು ಮುಖಾಂತರ ಹುಬ್ಬಳ್ಳಿಗೆ ಬಂದು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದಲ್ಲಿ ನೆಲೆಸಿದ್ದರು.
ಇಂದು ಅಣ್ಣಿಗೇರಿಯ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳಿ ಶಿವಕುಮಾರ ಸ್ವಾಮಿಗಳನ್ನು ಮನವೊಲಿಸಿ, ಬರುವ ದಿನಗಳಲ್ಲಿ ನಿಮ್ಮ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸುತ್ತೇನೆ ಎಂದು ಹಲವು ಸ್ವಾಮಿಗಳ ಸಮ್ಮುಖದಲ್ಲಿ ಒಪ್ಪಿಗೆ ಪಡೆದು ಮರಳಿ ಪಟ್ಟಣಕ್ಕೆ ಕರೆತಂದಿರುವ ಹಿನ್ನೆಲೆ ಪಟ್ಟಣದ ಮುಖ್ಯ ದ್ವಾರದಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಕ್ತರು ಸಡಗರ ದಿಂದ ಬರಮಾಡಿಕೊಂಡು ತೆರೆದ ವಾಹನದ ಮುಖಾಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದಾರಿ ಉದ್ದಕ್ಕೂ ಶಿವ ಬಜನಿ ಗೀತೆಗಳೊಂದಿಗೆ ದಾಸೋಹ ಮಠಕ್ಕೆ ಆಗಮಿಸಿದರು.
Kshetra Samachara
06/01/2022 07:13 pm