ಕುಂದಗೋಳ : ಓಂಕಾರದ ಬಂಡಿಯ ರಥ, ಚಕ್ಕಡಿ ಕಟ್ಟಿಕೊಂಡು ಎತ್ತುಗಳ ಸವಾರಿ ಹೊರಟ ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು ಚಕ್ಕಡಿ ಮುಂದೆ ಸಕಲ ಭಕ್ತಾಧಿಗಳ ಸಾಲು, ಆರತಿ ದೀಪಗಳ ಬೆಳಕು ಇದು ತ್ರಿವಿಧ ದಾಸೋಹಿ ಲಿಂಗೈಕ್ಯ ಕಲ್ಯಾಣಪುರ ಬಸವಣ್ಣಜ್ಜನವರ ಶ್ರೀಗಳ ನಡೆ ಭಕ್ತರ ಮನೆ ಕಡೆ ಕಾರ್ಯಕ್ರಮ.
ಕುಂದಗೋಳ ಪಟ್ಟಣದಲ್ಲಿ ತ್ರಿವಿಧ ದಾಸೋಹಿ ಕಲ್ಯಾಣಪುರ ಮಠ 2023ಕ್ಕೆ ಸ್ಥಾಪನೆಯಾಗಿ ಐವತ್ತು ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಅಭಿನವ ಕಲ್ಯಾಣಪುರ ಬಸವಣ್ಣನವರು ಪ್ರಸಕ್ತ ಜನೇವರಿ 1 ರಿಂದ ಕುಂದಗೋಳ ತಾಲೂಕಿನ ಪ್ರತಿ ಹಳ್ಳಿಯಲ್ಲೂ ಪ್ರವಚನ ಕಾರ್ಯಕ್ರಮ ಆರಂಭಿಸಿದ್ದಾರೆ, ಅದರಂತೆ ಮೊದಲನೇಯದಾಗಿ ಯರೇಬೂದಿಹಾಳ ಗ್ರಾಮದಲ್ಲಿ ಮೊಟ್ಟ ಮೊದಲ ಪ್ರವಚನ ಕಾರ್ಯಕ್ರಮ ಯಶಸ್ವಿಯಾಗಿದೆ.
ಇನ್ನೂ ಶ್ರೀಗಳ ಪ್ರವಚನ ಕೇಳಿದ ಯರೇಬೂದಿಹಾಳ ಗ್ರಾಮಸ್ಥರು ಕಲ್ಯಾಣಪುರ ಮಠಕ್ಕೆ ಲೋಕ ಕಲ್ಯಾಣಕ್ಕಾಗಿ ತಮ್ಮ ಕೈಲಾದ ಸೇವೆ ಮಾಡುತ್ತಲಿದ್ದು, ಅಭಿನವ ಕಲ್ಯಾಣಪುರ ಬಸವಣ್ಣನವರು ಹಾಗೂ ಶಿವಪ್ರಸಾದ್ ದೇವರುಗಳು ಪಾದಪೂಜೆ ಕಾರ್ಯಕ್ರಮದ ಮೂಲಕ ಭಕ್ತಿ ಸೇವೆ ಸ್ವೀಕರಿಸುವ ಕಾರ್ಯ ಕೈಗೊಂಡಿದ್ದಾರೆ.
Kshetra Samachara
04/01/2022 01:05 pm