ಧಾರವಾಡ: ಇಂದು ದೇಶದಾದ್ಯಂತ ಜನ 2022 ಹೊಸ ವರ್ಷವನ್ನು ಸ್ವಾಗತಿಸಿಕೊಂಡಿದ್ದಾರೆ. ನೈಟ್ ಕರ್ಫ್ಯೂ ಜಾರಿಯಲ್ಲಿದ್ದಿದ್ದರಿಂದ ಧಾರವಾಡದ ಜನ ಹೊಸ ವರ್ಷದ ಸಂಭ್ರಮಾಚರಣೆ ಮಾಡಲಿಲ್ಲ. ಆದರೆ, ಹೊಸ ವರ್ಷದ ಮೊದಲ ದಿನವಾದ ಶನಿವಾರ ಧಾರವಾಡದ ಜನತೆ ನುಗ್ಗಿಕೇರಿ ಹನುಮಪ್ಪನ ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.
2022ರಲ್ಲಾದರೂ ಕೊರೊನಾ ಕಣ್ಮರೆಯಾಗಿ ಜನತೆ ಸುರಕ್ಷಿತವಾಗಿ ಇರುವಂತಾಗಲಿ ಎಂದು ಧಾರವಾಡದ ಜನ ಪ್ರಸಿದ್ಧ ನುಗ್ಗಿಕೇರಿ ಆಂಜನೇಯನ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಶನಿವಾರ ಆಂಜನೇಯನ ವಾರ ಆಗಿದ್ದರಿಂದ ಜನ ಸಹಜವಾಗಿ ದೇವಸ್ಥಾನಕ್ಕೆ ಬಂದಿದ್ದರು. ಇದರೊಟ್ಟಿಗೆ ಹೊಸ ವರ್ಷದ ಮೊದಲ ದಿನ ಶನಿವಾರವೇ ಆಗಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬಂದು ಆಂಜನೇಯನ ದರ್ಶನ ಪಡೆದರು.
Kshetra Samachara
01/01/2022 02:23 pm