ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಶಲವಡಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ, ಸಂಭ್ರಮದಲ್ಲಿ ಭಕ್ತಾದಿಗಳು

ಅಣ್ಣಿಗೇರಿ : ಕಳೆದ ವರ್ಷ ಶ್ರೀ ವರಸಿದ್ಧಿ ವೀರಭದ್ರೇಶ್ವರ ಜಾತ್ರೆ ಕೊರೋನಾದ ಕರಿ ನೆರಳಿನಿಂದಾಗಿ ಸಂಭ್ರಮದಿಂದ ನೆರವೇರಿಲ್ಲವಾದರೂ ಕೊರೋನಾದ ಮಾರ್ಗಸೂಚಿಗಳಂತೆ ಸರಳವಾಗಿ ಆಚರಿಸಲಾಗಿತ್ತು. ಆದರೆ ಈ ಬಾರಿ ಜಾತ್ರೆ ಸಡಗರ ಸಂಭ್ರಮ ಭಕ್ತರಲ್ಲಿ ಮನೆ ಮಾಡಿತ್ತು.

ಇನ್ನು ಜಾತ್ರೆ ತೇರು ಗ್ರಾಮದಲ್ಲಿ ಸಂಚರಿಸಿದ್ದು, ನಂತರ ಲಕ್ಷದೀಪೋತ್ಸವದ ಕಾರ್ಯಕ್ರಮ ಜರುಗುಲಿದೆ. ಹಾಗೂ ಬೆಳಿಗ್ಗೆಯಿಂದಲೇ ದೇವರಿಗೆ ಏಕಾದಶಿ,ರುದ್ರಾಭಿಷೇಕ ಸೇರಿದಂತೆ ಹಲವಾರು ತರದ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ದೇವಸ್ಥಾನದ ಆವರಣದ ಒಳಗಡೆ ಮತ್ತು ಹೊರಗಡೆ ಹಲವಾರು ಬಗೆಗಳ ಹೂಗಳು ಮತ್ತು ದೀಪದ ಅಲಂಕಾರ ಮಾಡಲಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.

ಇನ್ನು ಜಾತ್ರೆಯ ವಿಶೇಷದತ್ತ ನೋಡಿದರೆ ಜಾತ್ರೆಯ ನಂತರ 2 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತದೆ. ಪ್ರತಿ ದಿನವೂ ಧರ್ಮಸಭೆ, ಜಾನಪದ, ರಸಮಂಜರಿ, ಕಾರ್ಯಕ್ರಮಗಳು ಜರುಗಲಿವೆ.

Edited By : Shivu K
Kshetra Samachara

Kshetra Samachara

01/01/2022 09:46 am

Cinque Terre

22.65 K

Cinque Terre

0

ಸಂಬಂಧಿತ ಸುದ್ದಿ