ಧಾರವಾಡ: ಕ್ರಿಶ್ಚಿಯನ್ನರ ಪವಿತ್ರ ಹಾಗೂ ದೊಡ್ಡ ಹಬ್ಬವಾದ ಕ್ರಿಸ್‌ಮಸ್‌ನ್ನು ಧಾರವಾಡದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಧಾರವಾಡದ ಬಾಸೆಲ್ ಮಿಶನ್ ಶಾಲೆ, ಚರ್ಚ್‌ಗಳಿಗೆ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೇ ಹೆಬ್ರಿಕ್ ಮೆಮೋರಿಯಲ್ ಚರ್ಚ್‌ನಲ್ಲಿ ಕ್ರಿಶ್ಚಿಯನ್ನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪುರುಷರು, ಮಹಿಳೆಯರು ಹಾಗೂ ಚಿಣ್ಣರು ಹಬ್ಬದ ಅಂಗವಾಗಿ ಹೊಸ ಬಟ್ಟೆಗಳನ್ನು ತೊಟ್ಟು ಯೇಸು ಕ್ರಿಸ್ತನಿಗೆ ನಮನ ಸಲ್ಲಿಸಲು ಚರ್ಚ್‌ಗೆ ಬರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಚರ್ಚ್‌ನಲ್ಲಿ ಕೇಕ್ ಕತ್ತರಿಸಿ, ಮೊಂಬತ್ತಿ ಬೆಳಗಿ ಕ್ರಿಶ್ಚಿಯನ್ನರು ಕ್ರಿಸ್‌ಮಸ್ ಹಬ್ಬವನ್ನು ಆಚರಿಸಿದರು.
ನಂತರ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೇ ಕ್ರೈಸ್ತ ಧರ್ಮಗುರುಗಳು ಧಾರ್ಮಿಕ ಪ್ರವಚನ ನೀಡಿದರು.
Kshetra Samachara
25/12/2021 04:13 pm