ಹುಬ್ಬಳ್ಳಿ- ಇಂದು ಪೌರ್ಣಮಿ ಅಂಗವಾಗಿ 18 ವರ್ಷದ ಶಬರಿಮಲೈ ಯಾತ್ರೆ ನಿಮಿತ್ತ, ಇಂದು
ವಿ. ಎಸ್.ವಿ ಪ್ರಸಾದ್ ಗುರುಸ್ವಾಮಿ ಅವರು, ನಗರದ ಶಿರೂರ ಪಾರ್ಕದಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ, 18 ಮೆಟ್ಟಿಲು ಮಹಾಪಡಿ ಪೂಜೆ ಸಲ್ಲಿಸಿ, ಎಲ್ಲ ಭಕ್ತರಿಗೆ ಅನ್ನಸಂತರ್ಪಣೆಯನ್ನು ಹಮ್ಮಿಕೊಂಡಿದ್ದರು.
ಈ ದೇವಸ್ಥಾನ ಶಬರಿಮಲೈ ಅಯ್ಯಪ್ಪನ ದೇವಸ್ಥಾನ ಹೇಗಿದಿಯೋ ಅದೇ ರೀತಿ, ಹುಬ್ಬಳ್ಳಿಯ ಶಿರೂರ ಪಾರ್ಕ್‌ದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಉದ್ಯಮಿ ಆನಂದ ಸಂಕೇಶ್ವರ ಅವರು ಗುರುಸ್ವಾಮಿ ವಿ.ಎಸ್.ವಿ ಪ್ರಸಾದ್ ಅವರಿಗೆ ಸನ್ಮಾನ ಮಾಡಿ ಗೌರವ ಸಲ್ಲಿಸಿದರು. ಈ ಮಹಾಪಡಿ ಪೂಜೆಗೆ ನೂರಾರು ಅಯ್ಯಪ್ಪ ಮಾಲೆ ಹಾಕಿದವರು ಹಾಗೂ ಭಕ್ತರು ಭಾಗವಹಿಸಿದ್ದರು.
Kshetra Samachara
18/12/2021 09:39 pm