ಅಣ್ಣಿಗೇರಿ : ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಪಟ್ಟಣದ ಆರಾಧ್ಯದೈವ ಶ್ರೀ ಅಮೃತೇಶ್ವರ ರಥೋತ್ಸವ ಡಿಸೆಂಬರ್ 18 ರಂದು ನೆರವೇರಲಿದ್ದು, ಡಿಸೆಂಬರ್ 17 ಶುಕ್ರವಾರ ಸಾಯಂಕಾಲ ಕಲ್ಯಾಣೋತ್ಸವದ ಕಾರ್ಯಕ್ರಮಗಳು ನಡೆಯುತ್ತವೆ ಎಂದು ದೇವಸ್ಥಾನದ ಆಡಳಿತ ವರ್ಗದಿಂದ ತಿಳಿದು ಬಂದಿದೆ.
ಇನ್ನು ಈಗಾಗಲೇ ರಥೋತ್ಸವದ ಸಿದ್ಧತೆಗಳು ಪೂರ್ಣಗೊಂಡಿದ್ದು, ದೇವಸ್ಥಾನಕ್ಕೆ ಹೂವಿನ ಅಲಂಕಾರ ದೀಪದ ಅಲಂಕಾರ ಮಾಡಲಾಗಿತ್ತಿದೆ. ಇದೇ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ಲಿಂಗರಾಜ ಕುಲಕರ್ಣಿ ಮಾತನಾಡಿ, ಸರ್ಕಾರದ ಕೆಲವೊಂದಿಷ್ಟು ಕೊರೋನಾದ ನಿಯಮಗಳನ್ನು ಪಾಲಿಸಲಾಗುತ್ತದೆ. ಭಕ್ತಾದಿಗಳು ಇದಕ್ಕೆ ಸಹಕಾರ ನೀಡಬೇಕೆಂದು ವಿನಂತಿಸಿಕೊಂಡರು.
Kshetra Samachara
17/12/2021 07:59 pm