ಹುಬ್ಬಳ್ಳಿ: ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠದಲ್ಲಿ ಸುಮಾರು 16.18 ಲಕ್ಷ ರೂ. ಹಾಗೂ 14 ಸಾವಿರ ಮೌಲ್ಯದ ಬೆಳ್ಳಿ - ಬಂಗಾರದ ಕಾಣಿಕೆ ಸಂಗ್ರಹವಾಗಿದೆ.
ನವೆಂಬರ್ 24 ರಿಂದ ಡಿಸೆಂಬರ್ 15 ರವರೆಗೆ ಸಂಗ್ರಹದ ಕಾಣಿಕೆ ಪೆಟ್ಟಿಗೆಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿದ್ಧಾರೂಢನಗರ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ಎಣಿಕೆ ಮಾಡಲಾಗಿದೆ. ಒಟ್ಟು 16,18,605 ರೂ ಮತ್ತು 14,408 ರೂ ಮೌಲ್ಯದ ಬಂಗಾರ ಮತ್ತು ಬೆಳ್ಳಿ ಸಂಗ್ರಹವಾಗಿದೆ. ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮೀಟಿಯ ವೈಸ್ ಚೇರಮನ್ನ ಗೋವಿಂದ ಮಣ್ಣೂರ, ಗೌರವ ಕಾರ್ಯದರ್ಶಿ ಜಗದೀಶ ಮಗಜಿಕೊಂಡಿ , ಧರ್ಮದರ್ಶಿಗಳಾದ ಎಸ್.ಐ. ಕೋಳಕೂರ, ಜಿ.ಎಸ್ . ನಾಯಕ, ಮಹೇಶಪ್ಪ ಹನಗೋಡಿ, ಧರಣೇಂದ್ರ ಜವಳಿ ಹಾಗೂ ರಾಜು ಮುನವಳ್ಳಿ , 2 ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದ ಶಿರಸ್ತೆದಾರರು ಹಾಗೂ ಭಕ್ತರಾದ ಶಂಕರಗೌಡ ಸಂಗೊಂದಿ ವಹಿಸಿಕೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.
Kshetra Samachara
16/12/2021 11:21 am