ಕುಂದಗೋಳ : ಪಟ್ಟಣದ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ಮಠ ಹಾಗೂ ಬಸವಣ್ಣನ ದೇವಸ್ಥಾನ ಎರೆಡೂ ಇದೆ, ದೇವರು ಮಾತನಾಡದೇ ಕೆಲಸ ಮಾಡಿದ್ರೇ, ಮಠದ ಸ್ವಾಮಿ ಮಾತನಾಡಿ ಕೆಲಸ ಮಾಡ್ತಾರೆ ಎಂದು ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಪಕೀರ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಅವರು ಕುಂದಗೋಳ ಪಟ್ಟಣದ ಕಲ್ಯಾಣಪುರ ಬಸವಣ್ಣನವರ ಮಠದ ಐವತ್ತನೇ ವರ್ಷದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ ಕಲ್ಯಾಣಪುರ ಮಠ ಸತತ ಐವತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅವಿಸ್ಮರಣೀಯವಾಗಿ ಬೆಳೆದಿದೆ. ಈ ಮಠದ ಐವತ್ತನೇ ವರ್ಷಕ್ಕೆ ಭಕ್ತರು ಕೊಡುಗೆ ಅಪಾರವಾಗಿದೆ ಎಂದರು.
ಜನೇವರಿ 2023ಕ್ಕೆ ಮಠ ಐವತ್ತು ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು ರಾಜ್ಯಾದ್ಯಂತ ಮಠಾಧೀಶರು, ಭಕ್ತಾಧಿಗಳು ಪೂರ್ವಭಾವಿ ಸಭೆಗೆ ಆಗಮಿಸಿ ಮಠಕ್ಕೆ ತಮ್ಮ ಸೇವೆ ಸಲ್ಲಿಸುವ ವಾಗ್ದಾನ ಮಾಡಿದ್ದು, ಈವರೆಗೆ ಒಟ್ಟು 25 ಲಕ್ಷ ರೂಪಾಯಿ ಕಲ್ಯಾಣಪುರ ಮಠದ ಐವತ್ತನೇ ವರ್ಷದ ಕಾರ್ಯಕ್ರಮ ಹಾಗೂ ಅಭಿನವ ಕಲ್ಯಾಣಪುರ ಬಸವಣ್ಣನಜ್ಜನವರ ನಿರಂಜನಚರ ಪಟ್ಟಾಧಿಕಾರಕ್ಕೆ ಭಕ್ತ ಸಾಗರ ಕಾಣಿಕೆ ಘೋಷಣೆ ಮಾಡಿದೆ.
Kshetra Samachara
29/11/2021 10:58 pm