ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಮಾರ್ಕೆಟಗೆ ಲಗ್ಗೆ ಇಟ್ಟ ಜೋಳದ ದಂಟು, ಬಣ್ಣಿ ಎಲೆ: ಗಗನಕ್ಕೆರೀದ ಆಯುಧ ಪೂಜಾ ಸಾಮಗ್ರಿಗಳು.

ಧಾರವಾಡ : ಕಳೆದೆರಡು ವರ್ಷದಿಂದ ಸಡಗರ ಸಂಭ್ರಮ ವಿಲ್ಲದೆ ಕಳೆಗುಂದಿದ್ದ ವಿಜಯದಶಮಿ ಮತ್ತು ಆಯುಧಪೂಜೆ ಹಬ್ಬಕ್ಕೆ ಈ ಬಾರಿ ಧಾರವಾಡ ಜಿಲ್ಲೆಯ ಜನ ಭರ್ಜರಿ ತಯಾರಿ ನಡೆಸಿದ್ದಾರೆ. ವಿಜಯದಶಮಿ ಮತ್ತು ಆಯುಧಪೂಜೆಗೆ ಅಗತ್ಯವಾಗಿ ಬೇಕಾಗುವ ವಸ್ತುಗಳು ಎಂದರೆ ಹೂವು, ಜೋಳದ ದಂಟು ಹೀಗಾಗಿ ಜೋಳದ ದಂಟು, ಕಬ್ಬಿನ ಗೊನೆಗಳಿಗೆ ಇಂದು ಎಲ್ಲಿಲ್ಲದ ಬೆಲೆ ಬಂದಿದೆ.

ಧಾರವಾಡ ಮಾರುಕಟ್ಟೆಗೆ ನಿನ್ನೆ ರಾತ್ರಿಯಿಂದಲೇ ಲಗ್ಗೆ ಇಟ್ಟಿರುವ ಜೋಳದ ದಂಟು, ಬಣ್ಣಿ ಎಲೆ, ಸೇರಿದಂತೆ ಆಯುಧ ಪೂಜೆಯ ಸಾಮಗ್ರಿಗಳ ಬೆಲೆಗಳು ಗಗನಕ್ಕೆರಿದೆ. 5 ಜೋಳದ ದಂಟಿನ ಬೆಲೆ 20-30 ರೂಗಳಾದರೆ, ಕಬ್ಬಿನ ಗೊನೆಗಳಿಗೆ 40-50 ರೂ ನಿಗದಿ ಪಡಿಸಿ ಮಾರಾಟ ಮಾಡ್ತಿದ್ದಾರೆ.

ಒಟ್ಟಿನಲ್ಲಿ ಎರಡೂ ವರ್ಷಗಳಿಂದ ಕಳೆಗುಂದಿದ್ದ ವಿಜಯದಶಮಿ ಹಬ್ಬದ ಸಡಗರ ಇಂದು ಕಳೆಗಟ್ಟಿದ್ದು, ಧಾರವಾಡ ಜನತೆ ದುಬಾರಿ ಬೆಲೆ ತೆತ್ತಾದರೂ ವಿಜಯದಶಮಿ ಮತ್ತು ಆಯುಧಪೂಜೆ ಹಬ್ಬವನ್ನು ಸಂಭ್ರಮಿಸಲು ಸಿದ್ದವಾಗಿದ್ದಾರೆ.

Edited By : Manjunath H D
Kshetra Samachara

Kshetra Samachara

14/10/2021 06:40 pm

Cinque Terre

49.25 K

Cinque Terre

1

ಸಂಬಂಧಿತ ಸುದ್ದಿ