ಧಾರವಾಡ: ಧಾರವಾಡದ ಕಿಲ್ಲಾದಲ್ಲಿರುವ ದುರ್ಗಾದೇವಿಯನ್ನು ಇಂದು ಚಿನ್ನದ ಮುಖವಾಡದಿಂದ ಅಲಂಕರಿಸಲಾಗಿತ್ತು. ಚಿನ್ನದ ಮುಖವಾಡ ಧರಿಸಿ ಹೂವುಗಳಿಂದ ಅಲಂಕಾರಗೊಂಡ ದುರ್ಗೆ ಭಕ್ತರಿಗೆ ದರ್ಶನ ನೀಡಿದಳು.
ಐತಿಹಾಸಿಕ ಹಿನ್ನೆಲೆಯುಳ್ಳ ಈ ದುರ್ಗಾದೇವಿಗೆ ಪುರಾತನ ಕಾಲದ ಚಿನ್ನದ ಮುಖವಾಡ ಹಾಕಲಾಗಿತ್ತು. ನವರಾತ್ರಿ ಅಂಗವಾಗಿ ದುರ್ಗಾದೇವಿಯನ್ನು ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಅಲಂಕರಿಸಲಾಗುತ್ತಿದೆ.
ಹೀಗೆ ಅಲಂಕಾರಗೊಂಡ ದೇವಿಯ ದರ್ಶನ ಪಡೆಯಲು ಭಕ್ತ ಸಮೂಹವೇ ಹರಿದು ಬರುತ್ತಿದೆ.
Kshetra Samachara
13/10/2021 11:30 am