ಕುಂದಗೋಳ : ತಾಲೂಕಿನ ಬು.ಕೊಪ್ಪದ ಮೈಲಾರಲಿಂಗೇಶ್ವರ ಜಾತ್ರೆ ಇಂದು ಶಾಸ್ತ್ರೋಕ್ತವಾಗಿ ನೆರವೇರಿತು ಬೆಳಿಗ್ಗೆ ಮೈಲಾರಲಿಂಗೇಶ್ವರನಿಗೆ ಪೂಜಾಭಿಷೇಕ ನೇರವೇರಿಸಿ ಮೆರವಣಿಗೆ ಕೈಗೊಳ್ಳಲಾಯಿತು.
ಬಳಿಕ ಗೊರವಯ್ಯಜ್ಜ ಜೋಗಮ್ಮಗಳಿಂದ ವಿಶೇಷ ಪೂಜೆ ಸಲ್ಲಪಟ್ಟಿತು ಅನಂತರದಲ್ಲಿ ಘೋರವಯ್ಯ ವೇಷಧಾರಿಗಳು ಸರಪಳಿ ಪವಾಡ ಬೆಳಕು ಹೊಂಡಿಸುವ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರತಿವರ್ಷದಂತೆ ಈ ವರ್ಷವೂ ಒಂಬತ್ತು ದಿನಗಳ ಕಾಲ ಉಪವಾಸ ಮಾಡಿದ ಗೊರವಯ್ಯ ಬಿಲ್ಲನ್ನೇರಿ ಆಕಾಶ ಸಂಪಾದಿತಲೇ ಭೂ ದೇವಿ ಕಂಪಾದಿತಲೇ ಪರಾಕ್, ಭೂದೇವಿಗೆ ಆಕಾಶದಿಂದ ಮುತ್ತಿನ ಸರ ಹರಿದು ಬಿದ್ದತಲೇ ಪರಾಕ್, ಹುಟ್ಟಿದ ಕೂಸು ಗಾಬರಿಯಾಗಿ ನೋಡಿ ನಕ್ಕತಲೇ ಪರಾಕ್ ಎಂಬ ಮೂರು ಕಾರ್ಣಿಕ ನುಡಿದರು.
ಈ ಕಾರ್ಣಿಕ ರಾಜ್ಯ ರಾಷ್ಟ್ರದ ಮಳೆ ಬೆಳೆ ರಾಜ್ಯ ರಾಜಕೀಯದ ಒಳಾರ್ಥ ಒಳಗೊಂಡಿದ್ದು ಹಿರಿಯರು ಅವುಗಳನ್ನು ಅರ್ಥೈಸಿದರು, ಕೊರೊನಾ ಮಾರ್ಗಸೂಚಿಯಲ್ಲಿ ಜಾತ್ರೆ ಸರಳವಾಗಿ ನೆರವೇರಿತು.
Kshetra Samachara
08/10/2021 09:16 pm