ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿದ್ದಾರೂಢ ಮಠದಲ್ಲಿ 19 ಲಕ್ಷ ರೂ ದೇಣಿಗೆ ಸಂಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಮಠದ ಕಾಣಿಕೆ ಡಬ್ಬದಲ್ಲಿ 21 ದಿನಗಳಲ್ಲಿ 19.06 ಲಕ್ಷ ರೂ. ಸಂಗ್ರಹವಾಗಿದೆ. ಅಲ್ಲದೇ , 38,078 ಮೊತ್ತದ ಬೆಳ್ಳಿ ಸಾಮಗ್ರಿಗಳು ಸಂಗ್ರಹವಾಗಿವೆ. ಆಗಸ್ಟ್ 25 ರಿಂದ ಸೆಪ್ಟೆಂಬರ್ 15 ರವರೆಗೆ ಸಂಗ್ರಹವಾದ ಕಾಣಿಕೆಯನ್ನು ಸೆ .15 ರಂದು ಎಣಿಕೆ ಮಾಡಲಾಯಿತು. ಸ್ಟೇಟ್ ಬ್ಯಾಂಕ್ ಸಿದ್ದಾರೂಢನಗರ ಶಾಖೆಯ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಹಾಗೂ ಭಕ್ತರ ಸಮ್ಮುಖದಲ್ಲಿ ತೆರೆದು ಎಣಿಕೆ ಮಾಡಲಾಯಿತು. ಎಣಿಕೆ ಮೇಲ್ವಿಚಾರಣೆಯನ್ನು ಟ್ರಸ್ಟ್ ಕಮೀಟಿ ಚೇರಮನ್ ಡಿ.ಡಿ. ಮಾಳಗಿ , ಗೌರವ ಕಾರ್ಯದರ್ಶಿ ಜಗದೀಶ ಲ , ಮಗಜಿಕೊಂಡಿ ಹಾಗೂ ಧರ್ಮದರ್ಶಿಗಳು ವಹಿಸಿದ್ದರು.

Edited By : Shivu K
Kshetra Samachara

Kshetra Samachara

16/09/2021 02:54 pm

Cinque Terre

23.76 K

Cinque Terre

0

ಸಂಬಂಧಿತ ಸುದ್ದಿ