ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಿಶ್ರಿಕೋಟಿ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತ್ಯೋತ್ಸವ

ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿಯ ರಾಷ್ಟ್ರ ವ್ಯಾಪಿಯಾಗಿ ಏಕಕಾಲಕ್ಕೆ ಆಚರಣೆ ಮಾಡಲಾಗುತ್ತಿರವ, ಶ್ರೀ ವೀರಭದ್ರೇಶ್ವರ ಜಯಂತೋತ್ಸವವನ್ನು ಮಿಶ್ರಿಕೋಟಿ ಗ್ರಾಮದ ಪ್ಯಾಟಿ ಓಣಿ ಸಮೀಪದ, ವೀರಭದ್ರೇಶ್ವರ ದೇವಾಲಯದಲ್ಲಿ ಮಹಾಮಂಗಳಾರತಿ, ನಂತರ ತೊಟ್ಟಿಲು ಸೇವೆ ಹಾಗೂ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ಮೇಳದೊಂದಿಗೆ ಸರಳವಾಗಿ ನಡೆಸಲಾಯಿತು.

ಭಾದ್ರಪದ ಮಾಸದ ಎರಡನೇ ಮಂಗಳವಾರ ಶ್ರೀ ವೀರಭದ್ರೇಶ್ವರ ಜಯಂತಿಯ ದಿನದಂದು ಗ್ರಾಮದ ಸುಭಾಸ ಗುರುಸಿದ್ದಪ್ಪ ಕುಬಸದರವರು ಹೊಸ ಸಾಗ್ವನಿ ತೊಟ್ಟಿಲು ದೇಣಿಗೆಯಾಗಿ ದೇವಾಲಯಕ್ಕೆ ನೀಡಿದರು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ದೇವಸ್ಥಾನದಲ್ಲಿ ವಿಶೇಷಪೂಜೆ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಧ್ಯುಕ್ತವಾಗಿ ನೆರವೇರಿತು.

Edited By : Manjunath H D
Kshetra Samachara

Kshetra Samachara

15/09/2021 03:46 pm

Cinque Terre

19.07 K

Cinque Terre

0

ಸಂಬಂಧಿತ ಸುದ್ದಿ