ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ವಿಘ್ನೇಶ್ವರನ ಖರೀದಿಗೆ ಮುಗಿ ಬಿದ್ದ ಜನರು

ಹುಬ್ಬಳ್ಳಿ: ಸರಕಾರ ಕಡೆಗೂ ಷರತ್ತುಬದ್ದ ಗಣೇಶ ಆಚರಣೆಗೆ ಅನುಮತಿ ನೀಡಿದೆ. ಇದರಿಂದ ಗಣೇಶನ ಭಕ್ತರು ಕೊಂಚ ನಿರಾಳರಾಗಿದ್ದಾರೆ. ಅಲ್ಲದೇ ಗಣೇಶನ ಮೂರ್ತಿ ತಯಾರಕರಲ್ಲೂ ಒಂದು ರೀತಿಯ ನಿರಾಳತೆಯೆ ಭಾವ ಮೂಡಿದೆ. ಧಾರವಾಡ ಜಿಲ್ಲೆಯಲ್ಲೂ ಕೂಡ ಗಣೇಶೋತ್ಸವ ಆಚರಣೆ‌ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಮತ್ತೊಂದು ಕಡೆ ಗಣೇಶ ಮೂರ್ತಿ ತಯಾರಿಕರು ಹಾಗೂ ಮೂರ್ತಿ ವ್ಯಾಪಾರಸ್ಥರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.

ಹೌದು,,, ನಗರದ ಹಲವು ಕಡೆ ಗಣೇಶ ಮೂರ್ತಿಗಳ ಭರ್ಜರಿ ಮಾರಾಟ ನಡೆಯುತ್ತಿದ್ದು, ತಂಡೋಪತಂಡವಾಗಿ ಗಣೇಶನ ಮೂರ್ತಿ ಖರೀದಿಯಲ್ಲಿ ಜನ ನಿರತರಾಗಿದ್ದಾರೆ. ಕೊರೊನಾದಿಂದ ಇಷ್ಟು ದಿನ ಗ್ರಾಹಕರಿಲ್ಲದೇ ಕಂಗಾಲಾಗಿದ್ದ ಮೂರ್ತಿ ತಯಾಕರು, ಇದೀಗ ಗ್ರಾಹಕರ ಆಸಕ್ತಿ ಕಂಡು ಪುಳಕಿತರಾಗಿದ್ದಾರೆ. ಒಟ್ಟಾರೆ ಸರಕಾರದ ಷರತ್ತುಗಳಿಗೆ ಅನ್ವಯವಾಗಿ ಈ ಬಾರಿ ಗಣೇಶ ಹಬ್ಬ ಆಚರಣೆ ಮಾಡುತ್ತಿದ್ದು, ಗಣೇಶನ ವಿಗ್ರಹಗಳ ಮಾರಾಟದಲ್ಲಿ ಹೆಚ್ಚಳವಾಗಿರುವುದು ಎಲ್ಲರಿಗೂ ಖುಷಿ ತಂದಿದೆ ಎಂದು ಹೇಳಬಹುದು.

Edited By : Shivu K
Kshetra Samachara

Kshetra Samachara

10/09/2021 12:01 pm

Cinque Terre

126.19 K

Cinque Terre

8

ಸಂಬಂಧಿತ ಸುದ್ದಿ