ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
ನವಲಗುಂದ : ಗಣೇಶ ಚತುರ್ಥಿ ಬರುತ್ತಲೇ ಮೂರ್ತಿಗಳ ಮಾರಾಟ ಬಲು ಜೋರಾಗಿಯೇ ಇರುತ್ತೆ, ಆದರೆ ರಾಸಾಯನಿಕಯುಕ್ತ ಬಣ್ಣದ ಗಣೇಶ ಹಾಗೂ ನೀರಿನಲ್ಲಿ ಕರಗದ ಪಿಒಪಿ ಗಣೇಶ ಖರೀದಿ ಪರಿಸರಕ್ಕೆ ಹಾನಿಕಾರಕ ಎಂಬುದನ್ನು ಅರಿತ ಜನರು ಈಗ ಪರಿಸರ ಸ್ನೇಹಿ ಮಣ್ಣಿನ ಗಣೇಶ ಖರೀದಿ ಮಾಡುತ್ತಿರುವುದು ವಿಶೇಷ...
ಪಿಒಪಿ ಗಣೇಶ ಮೂರ್ತಿ ಬಗ್ಗೆ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದ ಬಳಿಕ ಪಿಒಪಿ ಗಣೇಶ ಮೂರ್ತಿ ತಯಾರಿಕೆ ಹಾಗೂ ಮಾರಾಟ ಪ್ರಮಾಣ ಭಾರಿ ಪ್ರಮಾಣದಲ್ಲಿ ತಗ್ಗಿದೆ. ಪರಿಸರ ಮತ್ತು ಜಲಚರಗಳಿಗೆ ಅಪಾಯಕಾರಿಯಲ್ಲದ ಮಣ್ಣಿನಿಂದ ಸಿದ್ಧಪಡಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವವರ ಸಂಖ್ಯೆ ಕೊಂಚ ಮಟ್ಟಿಗೆ ಜಾಸ್ತಿ ಆಗಿದೆ. ಈ ಮೂಲಕ ಈಗ ಜನರು ಪರಿಸರ ಸ್ನೇಹಿಯಾಗಿ ಗಣೇಶ ಹಬ್ಬ ಆಚರಿಸುತ್ತಿದ್ದಾರೆ. ಜನರು ಮಣ್ಣಿನ ಗಣಪನ ಕಡೆ ಆಸಕ್ತಿ ತೋರಿದರು ಸಹ ಪಿಒಪಿ ಗಣೇಶ ಮೂರ್ತಿ ಬಂದ ನಂತರ ಕೊಂಚ ಮಣ್ಣಿನ ಗಣಪ ಮಾರಾಟ ತಗ್ಗಿದೆ ಮತ್ತು ಕೋವಿಡ್ ನಿಂದಲೂ ಸಹ ಮಾರಾಟಕ್ಕೆ ತೊಂದರೆ ಆಗಿದೆ ಅಂತಾರೆ ನವಲಗುಂದ ಪಟ್ಟಣದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಕರಾದ ಪ್ರಕಾಶ್...
Kshetra Samachara
09/09/2021 11:31 am