ಧಾರವಾಡ: ಶ್ರಾವಣ ಮಾಸ ಬಂದ್ರೆ ಸಾಕು ಹಿಂದೂಗಳಿಗೆ ಹಬ್ಬಗಳ ಸರಮಾಲೆಯೆ ಬರುತ್ತದೆ. ಅಂತಹ ಹಬ್ಬಗಳ ಪೈಕಿ ಪ್ರಥಮ ವಂದಿತ,ಆದಿ ಪೂಜಿತ, ವಿಘ್ನ ನಿವಾರಕ ಗಣೇಶ ಚತುರ್ಥಿ ಕೂಡ ಒಂದು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಕರೀಛಾಯೆಯಿಂದಾಗಿ ಜನರ ವಿಘ್ನಕಳೆಯುವ ವಿನಾಯಕನ ಆರಾಧನೆಗೆ ಕಷ್ಟ ಎದುರಾಗಿದ್ದು, ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಸ್ಥಾಪಿಸಲು ಅವಕಾಶ ಇಲ್ಲದಿರುವುದರಿಂದ ಗಣೇಶ ಮೂರ್ತಿ ತಯಾರಕರ ಪರಿಸ್ಥಿತಿ ದುಸ್ತರಗೊಂಡಿದೆ.
ಕಳೆದೆರಡು ವರ್ಷದಿಂದ ಗಣೇಶ ಚತುರ್ಥಿ ಹಬ್ಬವನ್ನು ಅದ್ಧೂರಿ ಆಚರಣೆಗೆ ತುಸು ಬ್ರೇಕ್ ಬಿದ್ದತ್ತಾಗಿದೆ.ಈ ವರ್ಷ ಗಣಪತಿ ಹಬ್ಬವನ್ನು ಗ್ರ್ಯಾಂಡ್ ಆಗಿ ಮಾಡುವವರಿಗೆ ನಿರಾಸೆ ಮೂಡಿಸಿದೆ. ಇತ್ತ ಗಣೇಶ ಮೂರ್ತಿ ತಯಾರಿಸುವವರ ಬದುಕು ಬರೆ ಎಳೆದಂತಾಗಿದೆ.
ಈಗಾಗಲೇ ಲಕ್ಷಾಂತರ ರೂ.ಖರ್ಚು ಮಾಡಿ ಗಣೇಶ ಮೂರ್ತಿ ತಯಾರಿಸಿದ ಕಲಾವಿದರಿಗೆ ಸರ್ಕಾರ ಈ ಸರಳ ಗಣೇಶ ಚತುರ್ಥಿ ಆಚರಣೆ ಆದೇಶ ನೀಡಿ ಅದ್ದೂರಿ ಹಬ್ಬಕ್ಕೆ ಬ್ರೇಕ್ ಹಾಕಿದೆ.ಹೀಗಾಗಿ ಧಾರವಾಡ ಜಿಲ್ಲೆಯಾದ್ಯಂತ ಕೊರೊನಾ ಹಾವಳಿ ನಡುವೆಯೂ ವಿಘ್ನೇಶ್ವರ ಆಚರಣೆ ಸರಳವಾಗಿ ಆಚರಣೆ ಮಾಡಲು ತಯಾರಿಯಲ್ಲಿದ್ದು,ಆದರೆ ಕೊರೊನಾ 3 ನೇ ಅಲೆಯು ಚತುರ್ಥಿ ಆಚರಣೆಗೆ ನಿರಾಸೆ ಮೂಡಿಸಿದೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಕಲಾವಿದ ಮಂಜುನಾಥ ಹಿರೇಮಠ ಮಾತನಾಡಿ,ಕಳೆದ 30 ವರ್ಷಗಳಿಂದ ಪರಿಸರಕ್ಕೆ ಹಾನಿಯಾಗದಂತೆ ಪರಿಸರ ಸ್ನೇಹಿ ಗಣಪತಿ ಮೂರ್ತಿ ಮಣ್ಣಿನಲ್ಲಿ ಮಾತ್ರ ಗಣೇಶ ಮೂರ್ತಿ ತಯಾರಿಸುತ್ತಿದ್ದೇವೆ.ಕಳೆದ ಎರಡು ವರ್ಷಗಳಿಂದ ಲಾಸ್ ನಲ್ಲಿದ್ದೇವೆ.ಅನಿವಾಸಿ ಭಾರತೀಯರು ನಮ್ಮ ಜೊತೆಗೆ ಕೈಜೋಡಿಸಿ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತೇನೆಂದು ಹೇಳಿದ್ದಾರೆ.ಈಗಾಗಲೇ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಲು ಅವಕಾಶ ನೀಡುವಂತೆ ಪ್ರತಿಭಟನೆ ನಡೆಸಿ ಸರ್ಕಾರ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಅವಕಾಶ ನೀಡುತ್ತದೆ ಎಂಬುದು ಕಾದು ನೋಡಬೇಕಾಗಿದೆ.
ನಾವು ಮನೆಯಲ್ಲಿ ಕೂರಿಸುವ ಗಣೇಶ ರಾಸಾಯನಿಕ ಬಣ್ಣಗಳಿಂದ ಮುಕ್ತಿ ಹೊಂದಿರುವಂತೆ ನೋಡಿಕೊಳ್ಳೋಣ. ಪರಿಸರ ಸ್ನೇಹಿ ಬಣ್ಣದಿಂದ ಅಲಂಕರಿಸಿದ ಗಣೇಶನನ್ನು ಮಾತ್ರ ಕೂರಿಸಿ. ಆಗ ವಿಸರ್ಜನೆ ಮಾಡಿದಾಗ ನದಿಗಳಿಗೆ ಹಾಗೂ ಜಲಚರಗಳಿಗೂ ಯಾವುದೇ ಅಪಾಯ ಉಂಟಾಗದು. ನಾವೆಲ್ಲರೂ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸೋಣ ಎಂದು ಕಲಾವಿದ ಹಿರೇಮಠ ಹೇಳಿದರು.
ಪಬ್ಲಿಕ್ ನೆಕ್ಸ್ಟ್
ಪ್ರಶಾಂತ ಲೋಕಾಪುರ ಧಾರವಾಡ
Kshetra Samachara
26/08/2021 01:24 pm