ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫೆ.27 ಕ್ಕೆ ಶ್ರೀ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ಪಲ್ಲಕ್ಕಿ ಉತ್ಸವ

ಹುಬ್ಬಳ್ಳಿ: ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಟ್ರಸ್ಟ್, ಹಾಗೂ ಶಿಕ್ಕಿಲಗಾರ ಸಮಾಜ ಸೇವಾ ಸಂಘದ ಜಂಟಿಯಾಗಿ ಇದೇ ಫೆಬ್ರವರಿ 27 ರಂದು ಶ್ರೀ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ಪಲ್ಲಕ್ಕಿ ಉತ್ಸವವನ್ನು ನಗರದ ಹಳೆ ಹುಬ್ಬಳ್ಳಿಯ ಜಗದೀಶ ನಗರದ ಶ್ರೀ ರೇಣುಕಾದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಮಿಟಿಯ ಖಜಾಂಚಿ ಹರೀಶ ಜಂಗಲಿ ತಿಳಿಸಿದರು..

ಈ ಉತ್ಸವಕ್ಕೆ ಪೂಜ್ಯಶ್ರೀ ಮೋಹನ ಗುರು ಸ್ವಾಮಿಗಳು ಮತ್ತು ಪೂಜ್ಯಶ್ರೀ ಶಿಂಧೆ ಭಟ್ಟರು ಚಾಲನೆ ನೀಡಲಿದ್ದಾರೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರಾದ ಸಂತೋಷ ಆರ್, ಶೆಟ್ಟಿ, ಪ್ರದೀಪ ಶೆಟ್ಟರ್ ಹೀಗೆ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಆದ್ದರಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯಬೇಕೆಂದು ತಿಳಿಸಿದರು.

Edited By : Manjunath H D
Kshetra Samachara

Kshetra Samachara

25/02/2021 01:09 pm

Cinque Terre

27.05 K

Cinque Terre

0

ಸಂಬಂಧಿತ ಸುದ್ದಿ