ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಉಳವಿ ಚನ್ನಬಸವೇಶ್ವರ ಜಾತ್ರೆಗೆ ಹೊರಟ ಕುಂದಗೋಳದ ಎತ್ತಿನ ಬಂಡಿ

ಕುಂದಗೋಳ : ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಕುಂದಗೋಳ ಪಟ್ಟಣದಿಂದ ಕಲ್ಯಾಣಪುರ ಬಸವಣ್ಣನವರ ನೇತೃತ್ವದಲ್ಲಿ ಎತ್ತಿನ ಬಂಡಿಗಳು ಹೊರಡಲ್ಪಟ್ಟವು.

ವಿವಿಧ ವಾದ್ಯ ಮೇಳಗಳ ಜೊತೆ ಶೃಂಗರಿಸಿದ ಬಂಡಿ ಹಾಗೂ ಎತ್ತುಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹರ ಹರ ಮಹದೇವ ಎನ್ನುತ್ತಾ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಹೊರಡಲು ಅಭಿನವ ಕಲ್ಯಾಣಪುರ ಬಸವಣ್ಣನವರು ಬಂಡಿಯನ್ನು ನಡೆಸಿ ಜಾತ್ರೆಗೆ ಹೊರಡಲು ಅನುವು ಮಾಡಿಕೊಟ್ಟರು.

ವಿರೇಶ ರವದಿ ಕುಟುಂಬಸ್ಥರು ಎತ್ತಿನ ಬಂಡಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು, ಕುಂದಗೋಳ ಸಾರ್ವಜನಿಕರು ಬಂಡಿ ಜೊತೆ ಹೆಜ್ಜೆ ಹಾಕಿ ಸಾಥ್ ನೀಡಿದರು.

Edited By : Manjunath H D
Kshetra Samachara

Kshetra Samachara

19/02/2021 08:59 pm

Cinque Terre

59.36 K

Cinque Terre

4

ಸಂಬಂಧಿತ ಸುದ್ದಿ