ಕುಂದಗೋಳ : ತಾಲೂಕಿನ ಅಲ್ಲಾಪೂರ ಗ್ರಾಮದಲ್ಲಿ ವಿಠ್ಠಲ ರುಕ್ಮಿಣಿ ದೇವಿಯ ಪಲ್ಲಕ್ಕಿ ಉತ್ಸವ ದಿಂಡಿ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.ರಾತ್ರಿಯಿಂದಲೇ ಸಂತರ ಕಿರ್ತನೆ ಕಾರ್ಯಕ್ರಮಕ್ಕೆ ವೇದಿಕೆಯಾಗಿದ್ದ ದೇವಸ್ಥಾನದ ಆವರಣದಿಂದ ಇಂದು ವಿಠ್ಠಲ ರುಕ್ಮಿಣಿ ಪಲ್ಲಕ್ಕಿ ಉತ್ಸವ ಅಲ್ಲಾಪುರ ಕಡಪಟ್ಟಿ ಗ್ರಾಮಗಳಲ್ಲಿ ಸಂಚರಿಸಿ ಭಕ್ತರಿಂದ ಪೂಜಿಸಲ್ಪಟ್ಟಿತು.
ಪಲ್ಲಕ್ಕಿ ಮೆರವಣಿಗೆ ಜೊತೆ ವಾದ್ಯ ತಾಳ ಮೇಳಗಳೊಂದಿಗೆ ಕುಂಭ ಕೋಡಗಳನ್ನು ಹೊತ್ತ ಮಕ್ಕಳು ಮಹಿಳೆಯರು ಹಾಗೂ ಸಂತರು ಕೀರ್ತನೆ ಹೇಳುತ್ತ ಗ್ರಾಮವನ್ನು ಭಕ್ತಮಯ ಗೊಳಿಸಿದರು.ಪಲ್ಲಕ್ಕಿ ಉತ್ಸವ ದೇವಸ್ಥಾನ ತಲುಪಿದ ಬಳಿಕ ಭಕ್ತಾಧಿಗಳಿಗೆ ದೇವಸ್ಥಾನದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಕೂಡಾ ನಡೆಯಿತು.
Kshetra Samachara
19/02/2021 08:33 pm