ಕುಂದಗೋಳ : ಬಲ್ಮೂರಿ ಗಣೇಶನ ಮೂರ್ತಿ ಹೊತ್ತು ಊರೆಲ್ಲಾ ಸುತ್ತಿದ ಆನೆ. ವಾದ್ಯ ಡೊಳ್ಳಿನ ಮೇಳ ಕುದುರೆಗಳ ನೃತ್ಯ, ಕುಂಭ ಕೋಡಗಳನ್ನು ಹೊತ್ತ ಮಹಿಳೆಯರ ಸಾಲು ಇಷ್ಟೇಲ್ಲಾ ಕಂಡು ಬಂದಿದ್ದು, ಬೆನಕನಹಳ್ಳಿಯ ಬಲ್ಮೂರಿ ಗಣೇಶ ಹಾಗೂ ಹೊರಗಿನ ಸಿದ್ಧಪ್ಪಜ್ಜ ದೇವರ ಜಾತ್ರಾ ಮಹೋತ್ಸವದಲ್ಲಿ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಅದ್ಧೂರಿಯಾಗಿ ಬಲ್ಮೂರಿ ಗಣೇಶೋತ್ಸವದಲ್ಲಿ ಬೆಳಂ ಬೆಳಿಗ್ಗೆಯಿಂದಲೇ ಪೂಜಾ ಹೋಮ, ಹವನಗಳ ಜೊತೆ ಗಜಾನನ ಮಂತ್ರ ಪಠನೆ ಗೈದು ಮಹಾಭಿಷೇಕ ಮಾಡಲಾಯಿತು.
ಬಳಿಕ ದೇವಸ್ಥಾನಕ್ಕೆ ಭಕ್ತಾಧಿಗಳ ದಂಡು ಆಗಮಿಸಿ ಗಜಾನನ ದರ್ಶನ ಪಡೆದು ಪುನೀತರಾದರೇ, ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಿಂದ ಭಕ್ತರು ಆಗಮಿಸಿ ದೈವಿ ಕೃಪೆಗೆ ಪಾತ್ರರಾದರು, ನೆರೆದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
Kshetra Samachara
10/02/2021 10:07 pm