ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಖಿಲ ಭಾರತ ವೀರಶೈವ ಮಹಾಸಭಾ ಅಭಿನಂದನಾ ಸಭೆ

ಕುಂದಗೋಳ : ವೀರಶೈವ ಜಂಗಮರು ಎಲ್ಲೇಲ್ಲೋ ಚದುರಿ ಹೋಗಿದ್ದರು ಅಂತಹ ಜಂಗಮರು ವೀರಶೈವರು ಲಿಂಗಾಯತರನ್ನು ಒಂದುಗೂಡಿಸುವ ಕಾರ್ಯವನ್ನು ಈ ಅಖಿಲ ವೀರಶೈವ ಮಹಾಸಭೆ ನಡೆಸಿಕೊಂಡು ಸಮಾಜಪರ ಕೆಲಸ ಮಾಡುತ್ತದೆ ಎಂದು ಅಧ್ಯಕ್ಷ ಎ.ಬಿ.ಉಪ್ಪಿನ ಹೇಳಿದರು.

ಅವರು ಪಟ್ಟಣದ ಕಲ್ಯಾಣಪುರ ಬಸವಣ್ಣನವರ ಮಠದಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಸದಸ್ಯರ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿ ಮುಂಬುರುವ ದಿನಗಳಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಸಂಘಟನೆ ನಡೆಸುವ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭೆಗೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ನೂತನ 17 ಸದಸ್ಯರಿಗೆ ಕಲ್ಯಾಣಪುರ ಬಸವಣ್ಣನವರ ನೇತೃತ್ವದಲ್ಲಿ ಸನ್ಮಾನಿಸಿ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಲ್ಯಾಣಪುರ ಬಸವಣ್ಣನವರು ಮಾತನಾಡಿ ಜಂಗಮರು ವೀರಶೈವರು ಲಿಂಗಾಯತರು ಎಂಬಂತೆ ಎಲ್ಲ ಸಮಾಜದ ಏಳ್ಗೆಗಾಗಿ ಎಲ್ಲರೂ ಒಟ್ಟಾಗಿ ಶ್ರಮಿಸಿ ಏಕತೆ ಸಾಧಿಸಿರಿ ಈ ಅಖಿಲ ಭಾರತ ವೀರಶೈವ ಮಹಾಸಭಾ ಇತರರರಿಗೆ ಸ್ಪೂರ್ತಿಯಾಗಲಿ ಎಂದರು. ಹರಭಟ್ಟ ವಿದ್ಯಾಸಂಸ್ಥೆಗೆ ನೂತನ ಚೇರಮನ್ ಆಗಿ ನೇಮಕವಾದ ಅರವಿಂದಪ್ಪ ಕಟಗಿ ಅವರಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕುಂದಗೋಳ ಪಟ್ಟಣದ ಗುರು ಹಿರಿಯರು ಅಖಿಲ ಭಾರತ ವೀರಶೈವ ಮಹಾಸಭೆಯ ಸರ್ವ ಸದಸ್ಯರು ಹಾಗೂ ತಾಲೂಕಿನ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

07/02/2021 02:16 pm

Cinque Terre

48.45 K

Cinque Terre

0

ಸಂಬಂಧಿತ ಸುದ್ದಿ