ಕುಂದಗೋಳ : ದಾನ, ಧರ್ಮ ಮತ್ತು ದಯೆ ಮೇಲೆ ಸಮಾಜ ನಿಂತಿದೆ ಪ್ರತಿಯೊಬ್ಬರು ತಮ್ಮ ದುಡಿಮೆಯಲ್ಲಿ ಅಲ್ಪ ಭಾಗವನ್ನು ದಾನ, ಧರ್ಮ ಮಾಡುವ ಮೂಲಕ ಸತ್ಕಾರ್ಯಕ್ಕೆ ಮುಂದಾಗಿ ಆಗ ಮಾತ್ರ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
ತಾಲೂಕಿನ ಸಂಶಿ ಗ್ರಾಮದಲ್ಲಿ ಹಾಕಿರುವ ಪಂಡಿತ ಶ್ರೀ ಪಂಚಾಕ್ಷರಿ ಗವಾಯಿಗಳವರ ನಾಟ್ಯ ಸಂಘದ ರಂಗ ಮಂಟಪದಲ್ಲಿ ಗ್ರಾಮದ ಗ್ರಾ.ಪಂ ನೌಕರ ಮೌನೇಶ ಬಡಿಗೇರ ಹಾಗೂ ಕುಟುಂಬ ವರ್ಗದವರು ನೆರವೇರಿಸಿದ ನಾಣ್ಯಗಳ ತುಲಾಭಾರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿ
ಸಮಾಜದಲ್ಲಿ ಸೇವೆ ಮಾಡುವ ನಿರ್ಮಲ ಭಾವ ಎಲ್ಲರಿಗೂ ಬರಬೇಕು ಅಂದಾಗ ದೇವರ ಅನುಗ್ರಹದಿಂದ ಬದುಕು ಸಮೃದ್ಧವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮದ ಗುರು ಹಿರಿಯರು, ಮಹಿಳೆಯರು, ಮಕ್ಕಳು, ನಾಟ್ಯ ಸಂಘದ ಕಲಾವಿದರು, ಗ್ರಾಮ ಪಂಚಾಯಿತಿ ನೌಕರರು ಸಿಬ್ಬಂದಿಗಳು ಸದಸ್ಯರು ಉಪಸ್ಥಿತರಿದ್ದರು.
Kshetra Samachara
29/01/2021 02:52 pm