ನವಲಗುಂದ : ಸಂಕ್ರಾಂತಿ ನಿಮಿತ್ತ ನವಲಗುಂದದ ಕೂಡಲಸಂಗಮ ದೇವಸ್ಥಾನದಲ್ಲಿ ಇಂದು ಸಂಜೆ ಜಾತ್ರೆ ನಡೆಯಲಿದ್ದು ಅದಕ್ಕೆ ಇಂದು ಬೆಳಿಗ್ಗೆಯಿಂದಲೇ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನವಲಗುಂದದ ಕೂಡಲಸಂಗಮ ದೇವಸ್ಥಾನದ ಹತ್ತಿರ ಬೆಣ್ಣೆ ಹಳ್ಳ ಮತ್ತು ತುಪ್ಪರಿ ಹಳ್ಳ ಎರಡು ಹಳ್ಳಗಳು ಸೇರುವ ಸ್ಥಳದಲ್ಲಿ ಇಂದು ಜಾತ್ರೆ ನಡೆಯಲಿದೆ. ಇದಕ್ಕೆ ಇಂದು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಹೋಗುವ ರಸ್ತೆ ಸೇರಿದಂತೆ ದೇವಸ್ಥಾನದ ಆವರಣ ಸ್ವಚ್ಛತೆ ಮಾಡಿ, ಪೆಂಡಾಲ್ ಹಾಕಿ ಜಾತ್ರೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
Kshetra Samachara
14/01/2021 12:02 pm