ನವಲಗುಂದ: ಎಳ್ಳು ಅಮಾವಾಸ್ಯೆಯ ಪ್ರಯುಕ್ತ ನವಲಗುಂದದ ಜನರು ಕುಟುಂಬದ ಸದಸ್ಯರೊಂದಿಗೆ ತಮ್ಮ ಹೊಲಗಳಿಗೆ ತೆರಳಿ ಭೂ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಎಲ್ಲರೂ ಸೇರಿ ಊಟ ಮಾಡಿ ಸಂತಸ ಪಟ್ಟರು.
ಹೊಲದಲ್ಲಿ ಜೋಳದ ಕಣಿಕೆಯಿಂದ ಕೊಂಪೆ ಸಿದ್ಧಪಡಿಸಿ, ಒಳಗೆ ಪಾಂಡವರ ಪ್ರತಿಮೆಗಳ ರೂಪದಲ್ಲಿ ಐದು ಕಲ್ಲುಗಳನ್ನು ಇಟ್ಟು ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಇನ್ನು ಕುಟುಂಬ ಸಮೇತ ಮನೆಯಿಂದ ಕೊಂಡೊಯ್ದ ಅಡುಗೆಯ ಬುತ್ತಿಯನ್ನು ಹೊಲದಲ್ಲೇ ಉಂಡು ಸಂತಸ ಪಟ್ಟರು.
Kshetra Samachara
13/01/2021 10:05 pm