ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವನಗರದಲ್ಲಿ ಶ್ರೀ ನರಸಿಂಹ ದೇವರಿಗೆ ಸಹಸ್ರ ಶಂಖಾಭಿಷೇಕ

ಹುಬ್ಬಳ್ಳಿ : ನಿತ್ಯದ ಸಾಂಸಾರಿಕ ಜಂಜಾಟದಲ್ಲಿ ಪರಮಾತ್ಮನನ್ನು ಪೂರ್ಣ ಪ್ರಮಾಣದಲ್ಲಿ ಪಠಿಸುವುದಕ್ಕಾಗುವುದಿಲ್ಲ. ಇಂದು ಮರ್ಗಶಿರ ಶುದ್ಧ ಪೌರ್ಣಿಮೆ, ಬ್ರಹ್ಮಾಂಡ ಸ್ವರೂಪಿ ಅನಂತರೂಪಗಳ ಭಗವಂತನನ್ನು ಸ್ಮರಿಸಿ ಆತನ ಅಪರಿಮಿತ ಉಪಕಾರಗಳ ನೆನಪಿಸಿಕೊಳ್ಳುವ ಸುದಿನ, ವಿಷ್ಣು ಸಹಸ್ರ ಪಾರಾಯಣದ ಮೂಲಕ ಅನುಸಂಧಾನ ಮಾಡಿ ಅಭಿಮಾನಿ ದೇವರುಗಳ ಚಿಂತನೆ ಮಾಡಬೇಕೆಂದು ಪಂ.ಹೇಮಂತಕುಮಾರ ಆಚಾರ ಗುಡಿ ಕರೆ ನೀಡಿದರು.

ವಿಶ್ವ ಮಾಧ್ವ ಮಹಾ ಪರಿಷತ್ತಿನ ನವನಗರ ಘಟಕದಾಶ್ರಯದಲ್ಲಿ ನವನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬೆಳಗ್ಗೆ ಶ್ರೀ ನರಸಿಂಹ ದೇವರಿಗೆ ಶಂಖದಿಂದ 1008 ಬಾರಿ ಕ್ಷೀರಾಭಿಷೇಕ ಪೂರೈಸಿ ಅವರು ಮಾತನಾಡುತ್ತಿದ್ದರು. ನಂತರ ಪಂಚಾಮೃತ,ಅಲಂಕಾರ ಪೂಜೆ ಮಹಾ ಮಂಗಳಾರತಿಗಳು ಯಥಾ ಸಾಂಗವಾದವು. ಗುರುರಾಜ ಪಾಟೀಲ ಸಹಕರಿಸಿದರು.

ಶ್ರೀಧರ ಕುಲಕರ್ಣಿ,ಶೇಷಗಿರಿ ಮಂದಿ,ಗುರುರಾಜ, ಶರದ್, ಭಾದ್ರಿ ಸಹೋದರರು,ಜಮಖಂಡಿ, ಜಹಗೀರದಾರ, ದೇಶಪಾಂಡೆ,ರಾರಾವಿ, ಬೀಡಕರ,ಬಟವಿ,ಪಾಂಡುರಂಗಿ, ಮಠದ,ತೊನಸೆ ಆಚಾರ ಸೇರಿದಂತೆ ನೂರಾರು ಮಹಿಳೆಯರು ಮಕ್ಕಳು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

ವರದಿ: ನಾರಾಯಣ ವೆಂ.ಭಾದ್ರಿ.

Edited By :
Kshetra Samachara

Kshetra Samachara

30/12/2020 08:09 pm

Cinque Terre

26.57 K

Cinque Terre

1

ಸಂಬಂಧಿತ ಸುದ್ದಿ