ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ದೀಪಾವಳಿಗೆ ಹಿಂದೂ ಮುಸ್ಲಿಂ ಭಾವೈಕ್ಯತೆ ಎತ್ತಿ ಹಿಡಿದ ಮಂಜುನಾಥ್ ಛಲವಾದಿ

ನವಲಗುಂದ : ದೀಪಾವಳಿಗೆ ಲಕ್ಷ್ಮಿಯನ್ನು ಪೂಜೆ ಮಾಡ್ತಾರೆ ಆದರೆ ನವಲಗುಂದದಲ್ಲಿ ಮಂಜುನಾಥ್ ಛಲವಾದಿ ಎಂಬುವವರೊಬ್ಬರೂ ಲಕ್ಷ್ಮಿಯೊಂದಿಗೆ ಮುಸ್ಲಿಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾ ಮದೀನಾ ಫೋಟೋವನ್ನು ಇಟ್ಟು ಪೂಜೆ ಮಾಡಿ, ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

ಹೌದು ನವಲಗುಂದ ಪಟ್ಟಣದ ಲಿಂಗರಾಜ್ ವೃತ್ತದ ಬಳಿ ಇರುವ ಅವರ ಅಂಗಡಿಯಲ್ಲಿ ಇಂದು ದೀಪಾವಳಿ ಪ್ರಯುಕ್ತ ಪೂಜೆ ಮಾಡುವ ಸಂದರ್ಭದಲ್ಲಿ ಲಕ್ಷ್ಮಿಯೊಂದಿಗೆ ಸರಸ್ವತಿ, ಗಣೇಶ ಸೇರಿದಂತೆ ಮುಸ್ಲಿಂ ಧರ್ಮದ ಪವಿತ್ರ ಸ್ಥಳವಾದ ಮಕ್ಕಾ ಮದೀನಾದ ಫೋಟೋ ಇಟ್ಟು ಪೂಜೆ ಸಲ್ಲಿಸಿ, ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

17/11/2020 10:29 am

Cinque Terre

25.89 K

Cinque Terre

7

ಸಂಬಂಧಿತ ಸುದ್ದಿ