ಧಾರವಾಡ: ನವರಾತ್ರಿ ಬಂತೆಂದರೆ ಸಾಕು ದುರ್ಗಾದೇವಿ ಒಂದೊಂದು ದಿನ ವಿಶಿಷ್ಟ ರೀತಿಯಲ್ಲಿ ಪೂಜಿಸಲ್ಪಡುತ್ತಾಳೆ.
9 ದಿನಗಳ ಕಾಲ ಶ್ರೀ ದುರ್ಗಾದೇವಿಗೆ ಶ್ರದ್ಧಾ ಭಕ್ತಿಯಿಂದ ಭಕ್ತಾದಿಗಳು ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ನವರಾತ್ರಿಯ 9 ದಿನಗಳ ಕಾಲ ದುರ್ಗಾದೇವಿಗೆ ವಿಶಿಷ್ಟ ಅಲಂಕಾರ ಮಾಡಲಾಗುತ್ತದೆ. ಧಾರವಾಡದ ಪ್ರಸಿದ್ಧ ದುರ್ಗಾದೇವಿ ದೇವಸ್ಥಾನದಲ್ಲಿ ಪ್ರತಿದಿನ ದೇವಿ ಒಂದೊಂದು ಅವತಾರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.
ನಿನ್ನೆಯಷ್ಟೆ ತರಕಾರಿಗಳ ಮಧ್ಯೆ ಕಂಗೊಳಿಸಿದ ಶ್ರೀ ದುರ್ಗೆ ಇಂದು ತಹರೇವಾರಿ ಹಣ್ಣುಗಳಿಂದ ಅಲಂಕಾರಗೊಂಡು ಎಲ್ಲರ ಕಣ್ಮನ ಸೆಳೆದಳು. ಸೇಬು, ಕಿತ್ತಳೆ, ದಾಳಿಂಬೆ, ಚಿಕ್ಕು, ಪೇರಲ, ಬಾಳೆ, ಸೀತಾ ಫಲ ಹಣ್ಣುಗಳಿಂದ ಇಂದು ದೇವಿಯನ್ನು ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆ ಅಲಂಕಾರಗೊಂಡು ನಿಂತಿದ್ದ ಶ್ರೀ ದೇವಿಯ ದರ್ಶನ ಪಡೆಯಲು ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
Kshetra Samachara
23/10/2020 05:04 pm