ಹೊರಕೇರಿ ಓಣಿಯ ಹತ್ತಿರ ಇರುವ ಶ್ರೀ ಜಗದ್ಗುರು ಅಜಾತ ನಾಗಲಿಂಗಸ್ವಾಮಿ ಮಠದಲ್ಲಿ ಆಧ್ಯಾತ್ಮಿಕ ಕುರಿತು 24ನೇ ನಾಗಲಿಂಗ ಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ಪರಮಪೂಜ್ಯ ಶ್ರೀ ವಿರೇಂದ್ರ ಮಹಾಸ್ವಾಮಿಗಳು ಜಗದ್ಗುರು ಶ್ರೀ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠ ನವಲಗುಂದವಹಿಸಿದ್ದರು. ಉಪನ್ಯಾಸ ನೀಡಿದ ಎ.ಆರ್.ಅಕ್ಕಿ ಗುರುಗಳು ಮಾತನಾಡಿ ಧಾರ್ಮಿಕತೆಯ ಆಧಾರದ ಆಧ್ಯಾತ್ಮಿಕ ಜೀವನದ ಶೈಲಿಯನ್ನು ಹೇಗೆ ರೂಪಿಸಿಕೊಳ್ಳದರ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ಸನ್ಮಾನಿತರಾದ ವಿಜಯ ಗಂಗಾ ಹರ್ತಿಮಠ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರು ಪ್ರಸಾದ ಸೇವೆ ಲಿಂಗಪ್ಪ ಗಡ್ಡಿ , ಶ್ರೀ ಪತ್ರೇಶ್ವರ ಮಲಸಮುದ್ರ, ನಿರೂಪಣೆ ವಿ ಎಮ್ ಹಿರೇಮಠ ರವಿರಾಜ್ ವರ್ಣೇಕರ್, ಬಿ ವಿ ಅಂಗಡಿ, ಎಂ.ವಿ.ಮುತ್ತಲಗೇರಿ ಮತ್ತು ಸನ್ಮಾನಿತಗೊಂಡ ಕಲಾವಿದರೂ ಸೇರಿದಂತೆ ದಶಾವತಾರ ಉಡುಪುಗಳನ್ನು ಧರಿಸಿದ ಮಕ್ಕಳು ಹಾಗೂ ಎಲ್ಲಾ ಭಕ್ತರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/10/2022 06:46 pm