ಛೋಟಾ ಮುಂಬೈ ಅಂತಾನೇ ಖ್ಯಾತಿ ಹೊಂದಿರುವ ಹುಬ್ಬಳ್ಳಿಯಲ್ಲಿ, ಈಗ ಎಗ್ಗಿಲ್ಲದೆ ನಾನ್ ಬ್ರ್ಯಾಂಡ್ ಸಿಗರೇಟ್ ಹಾವಳಿ ಹೆಚ್ಚಾಗಿದೆ. ಇದರ ಬಗ್ಗೆ ಗೊತ್ತಿದ್ದರು ಅಧಿಕಾರಿಗಳು ಮಾತ್ರ ಕಾಟಾಚಾರಕ್ಕೆ ದಾಳಿ ಮಾಡುತ್ತಿದ್ದಾರೆ.
ಅಷ್ಟಕ್ಕೂ ಈ ನಾನ್ ಬ್ರ್ಯಾಂಡ್ ಸಿಗರೇಟಿನಿಂದ ಏನೆಲ್ಲ ತೊಂದರೆಗಳು ಆಗುತ್ತವೆ ಗೊತ್ತಾ....? ಹಾಗಿದ್ರೆ ಈ ಸ್ಟೋರಿ ನೋಡಿ....
ಹೌದು,,,,, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದೇಶಿ ಸಿಗರೇಟ್ ಬ್ಯಾನ್ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಹುಬ್ಬಳ್ಳಿ - ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಅಕ್ರಮವಾಗಿ ಸಿಗರೇಟ್ ಮಾರಾಟವಾಗುತ್ತಿದೆ. ಗಾಂಜಾ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಪೊಲೀಸರು. ವಿದೇಶಿ ಸಿಗರೇಟ್ ಮಾರಾಟಗಾರರಿಗೆ ಯಾಕೇ ಬಂಧನ ಮಾಡತಿಲ್ಲ ಎಂಬುದು ಎಲ್ಲರ ಪ್ರಶ್ನೆಯಾಗಿದೆ.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಡೆಯುತ್ತಿರುವ ಗಾಂಜಾ ಹಾಗೂ ವಿದೇಶಿ ಸಿಗರೇಟ್ ಮಾರಾಟದ ಜಾಲ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ತಿಳಿಯದ ಸಂಗತಿಯೇನಲ್ಲ.
ಈ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ರೀತಿಯಲ್ಲಿ ವಿದೇಶಿ ಸಿಗರೇಟ್ ದಂಧೆ ಹಾವಳಿ ನಗರದಲ್ಲಿ ನಡೆಯುತ್ತಲೇ ಇದೆ. ಅಲ್ಲದೇ ಸಾಮಾನ್ಯ ಸಿಗರೇಟ್ ಗಳಿಗಿಂತ ವಿದೇಶಿ ಸಿಗರೇಟ್ಗಳಲ್ಲಿ ನಿಕೋಟಿನ್ ಪ್ರಮಾಣ ಜಾಸ್ತಿಯಿದ್ದು, ಮಾನವ ದೇಹಕ್ಕೆ ಹಾನಿಕಾರಕವಾದ ಕೆಮಿಕಲ್ ಕೂಡ ಇರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ಮಾದರಿ ಹೋಲುವ ವಿದೇಶಿ ಸಿಗರೇಟ್ ಗಳು ಸಂಪೂರ್ಣ ಭಾರತೀಯ ಮಾರುಕಟ್ಟೆ ಆವರಿಸಿಕೊಂಡಿವೆ. ಇದು ಭಾರತೀಯ ಸುಂಕ ಹಾಗೂ ತೆರಿಗೆ ವಂಚನೆಗೆ ಕಂಡು ಕೊಂಡಿರುವ ವಾಮ ಮಾರ್ಗವಾಗಿದೆಂದು ಹೇಳಬಹುದು.
ಆದ್ದರಿಂದ ಕೇವಲ ಅಧಿಕಾರಿಗಳು ಕಾಟಚಾರಕ್ಕೆ ದಾಳಿ ನೆಪದಲ್ಲಿ ರಿಸಿಪ್ಟ್ ಹಾಗೂ ಹಣ ಪಡೆದು ಬಿಟ್ಟು ಬಿಡಿತ್ತಾರೆ ಎಂಬ ಬಲವಾದ ಆರೋಪಗಳು ಸಹ ಕೇಳಿ ಬಂದಿವೆ.
ಒಟ್ಟಾರೆಯಾಗಿ ಅವಳಿ ನಗರದಲ್ಲಿ ವಿದೇಶಿ ಸಿಗರೇಟ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ನಿಯಂತ್ರಣ ಮಾಡುತ್ತಿರುವುದು ಎಗ್ಗಿಲ್ಲದೆ ನಡೆಯುತ್ತಿದೆ. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಕೇವಲ ದಂಡ ವಸೂಲಿ ಮಾಡಿ ಕೈತೊಳೆದುಕೊಳ್ಳುವುದನ್ನು ಬಿಟ್ಟು, ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ - ಈರಣ್ಣ ವಾಲಿಕಾರ, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/10/2022 01:17 pm