2022-23ನೇ ಸಾಲಿನ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಧಾರವಾಡ ಜಿಲ್ಲೆಯ ಎಲ್ಲಾ ರೈತರಿಂದ ಎಫ್ ಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಈ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಫ್.ಪಿ.ಒ ಕಂಪನಿಯ ಹೆಸರು ಕಾಳು ಖರೀದಿ ಕೇಂದ್ರ ಉದ್ಘಾಟನೆ ಮಾಡಲಾಯಿತು.
ಎಫ್.ಪಿ.ಓ ಕಂಪನಿಯ ಅಧ್ಯಕ್ಷರಾದ ಪ್ರಕಾಶ್ ಅಂಗಡಿ ಅವರು ಖರೀದಿ ಕೇಂದ್ರ ಉದ್ಘಾಟನೆ ಮಾಡಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದರು.
ಇನ್ನೂ ಸುತ್ತಮುತ್ತ ಗ್ರಾಮದಿಂದ ಹಾಗೂ ಪಟ್ಟಣದ ರೈತರು ಮಾತನಾಡಿ ಖರೀದಿ ಕೇಂದ್ರವನ್ನು ಸರ್ಕಾರ ಬೇಗನೆ ಪ್ರಾರಂಭ ಮಾಡಬೇಕಿತ್ತು, ಹಣದ ಅಡಚಣೆಗಾಗಿ ಹಾಗೂ ಮಳೆ ಕಾರಣದಿಂದ ಈಗಾಗಲೇ ರೈತರು ಹೊರಗಡೆ ತಮ್ಮ ಹೆಸರು ಮಾರಾಟ ಮಾಡಿದ್ದಾರೆ ಹಾಗೂ ಹೆಸರು ಕಾಳಿನ ತೇವಾಂಶ 12% ಪ್ರತಿಶತ ಬರಬೇಕೆಂದು ರೈತರಿಗೆ ಮಾರ್ಗಸೂಚಿಗಳು ಇದ್ದು, ಮಳೆ ಬಿಡದಿ ಸುರಿಯುತ್ತಿರುವುದರಿಂದ ಈ ವಾತಾವರಣದಲ್ಲಿ ತೇವಾಂಶ 12% ಪ್ರತಿಶತ ಬರಲು ಸಾಧ್ಯವಿಲ್ಲ ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ತರಹದ ತೇವಾಂಶ ಚೆಕ್ ಮಾಡದೆ ರೈತರ ಹೆಸರು ಕಾಳು ಖರೀದಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ನಂದೀಶ್ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/10/2022 08:20 pm