ಏನ್ರೀ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಹಾಗೂ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ರೇ ಎಷ್ಟು ದಿನಾ ಅಂತಾ ಪಾಪಾ ಚಾಕಲಬ್ಬಿ ಮಕ್ಕಳು ಹಳ್ಳದ ಸಮಸ್ಯೆ ಎದುರಿಸೋದು ರಾತ್ರಿಯಿಡೀ ಸಾರಿಗೆ ಬಸ್ಸಿನಲ್ಲಿ ಕಾಯೋದು ?
ಹೌದು ! ಅಧಿಕಾರಿಗಳೇ ನಿನ್ನೆ ಸುರಿದ ಹಸ್ತ ಮಳೆಗೆ ಚಾಕಲಬ್ಬಿ ಮತ್ತು ಸಂಶಿ ಸಂಪರ್ಕ ಕಲ್ಪಿಸುವ ಗೂಗಿಹಳ್ಳ ತುಂಬಿ ಹರಿದ ಪರಿಣಾಮ ಶಾಲಾ ಮಕ್ಕಳು 5 ಗಂಟೆಗೆ ಶಾಲೆ ಬಿಟ್ರೂ ಬರೋಬ್ಬರಿ 12 ಗಂಟೆವರೆಗೂ ಸಾರಿಗೆ ಬಸ್ಸಿನಲ್ಲಿ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಕಾಯ್ದು ಸುಸ್ತಾಗಿ ಹೋಗಿದ್ದಾರೆ.
ಅರೆ, ಸಾಹೇಬ್ರೆ ಮಕ್ಕಳಷ್ಟೇ ಅಲ್ಲಾ ಸ್ವಾಮಿ, ಪಾಪಾ ಜನಸಾಮಾನ್ಯರು ಸಹ ಈ ಅವ್ಯವಸ್ಥೆಗೆ ರೋಸಿ ಹೋಗಿದ್ದಾರೆ. ಇನ್ನೂ ರಾತ್ರಿ 12 ಗಂಟೆಯವರೆಗೆ ಬಸ್ಸಿನಲ್ಲಿ ಕಾಲ ಕಳೆದ ಮಕ್ಕಳು ತಮ್ಮ ಹಸಿವನ್ನೂ ತಣಿಸಿಕೊಳ್ಳಲು ಒಣ ಚುರುಮುರಿ, ಬಾಳೆಹಣ್ಣು ಸವಿದ ಸ್ಥಿತಿ ಛೇ ಛೇ ತಾಲೂಕು ಆಡಳಿತ ವ್ಯವಸ್ಥೆಗೆ ಮಹಾಶಾಪವೇ ಸರಿ.
ಈಗಾಗಲೇ ಪ್ರತಿಬಾರಿ ಹಳ್ಳ ಬಂದಾಗಲೂ ಸಮಸ್ಯೆಗೆ ಸಿಲುಕುವ ಮಕ್ಕಳು ಶಾಲೆ ಹಿಂದೊಮ್ಮೆ ಟ್ರ್ಯಾಕ್ಟರ್ ಏರಿ ಶಾಲೆಗೆ ಪ್ರಯಾಣ ಬೆಳೆಸಿದ್ದರೂ, ಇದೀಗ ರಾತ್ರಿಯೀಡಿ ಬಸ್ಸಿನಲ್ಲಿ ಕಾಯ್ದಿದ್ದಾರೆ ಮುಂದೇನು ? ದಯವಿಟ್ಟು ಜನಪ್ರತಿನಿಧಿಗಳೇ, ಲೋಕೋಪಯೋಗಿ ಅಧಿಕಾರಿಗಳೇ, ಸಚಿವರೇ, ಪಾಪಾ ಮಕ್ಕಳ ಕಷ್ಟಕ್ಕೆ ಧ್ವನಿಯಾಗಿರಿ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/10/2022 12:38 pm