ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದೀಪಕ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ : ಶವಕ್ಕಾಗಿ ಕುಟುಂಬಸ್ಥರ ಹರಸಾಹಸ

ಹುಬ್ಬಳ್ಳಿ : ದೀಪಕ ಪಟದಾರಿ ಪತ್ನಿ ಪುಷ್ಪಾ ಆತ್ಮಹತ್ಯೆ ಮಾಡಿಕೊಂಡ ನಂತರದಲ್ಲಿ ಇದೀಗ ಪ್ರಕರಣ ಮತ್ತಷ್ಟು ಜಟಿಲಗೊಳ್ಳುತ್ತಿದ್ದು ಶವವನ್ನು ಪಡೆಯಲು ಪುಷ್ಪಾ ತವರು ಮನೆ ಹಾಗೂ ಗಂಡನ ಮನೆಯವರ ನಡುವೆ ಜಟಾಪಟಿ ಶುರುವಾಗಿದ್ದು ಶವವನ್ನು ಯಾರಿಗೆ ಕೊಡಬೇಕು ಅಂತಾ ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ.

ನಿನ್ನೇ ನವನಗರದದಲ್ಲಿನ ದೀಪಕ ಅಕ್ಕನ ಮನೆಯಲ್ಲಿ ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಶವಾಗಾರಕ್ಕೆ ರವಾನಿಸಿದ್ದಾರೆ,ಆದ್ರೆ ಮರಣೋತ್ತರ ಪರೀಕ್ಷೆ ಮಾಡುವ ಮೊದಲೇ ಇದೀಗ ಶವವನ್ನು ಯಾರಿಗೆ ಹಸ್ತಾಂತರ ಮಾಡಬೇಕು ಅಂತಾ ಪೊಲೀಸರಿಗೆ ತಲೆನೋವಾಗಿದೆ.

ಮದುವೆಯಾಗಿ ಐದು ವರ್ಷ ಕಳೆದರೂ ಕೂಡಾ ತವರು ಮನೆಯವರು ಮಗಳು ಹೇಗಿದ್ದಾಳೆ ಅಂತಾ ತಿರುಗಿ ಕೂಡಾ ನೋಡಿಲ್ಲ. ಹೀಗಾಗಿ ನಮಗೆ ಶವವನ್ನು ಕೊಡಬೇಕು ಅಂತಾ ಸಂಜಯ ಪಟದಾರಿ ಕಣ್ಣೀರು ಹಾಕುತ್ತಿದ್ದಾರೆ.

ಸದ್ಯ ಕಾನೂನು ಪ್ರಕಾರ ದೀಪಕ ಹಾಗೂ ಪುಷ್ಪಾ ಮದುವೆಯಾಗಿ 7 ವರ್ಷ ಮುಗಿಯದ ಹಿನ್ನೆಲೆಯಲ್ಲಿ ಆಕೆಯ ಶವವನ್ನು ಆಕೆಯ ತವರು ಮನೆಯವರಿಗೆ ಹಸ್ತಾಂತರ ಮಾಡುವ ಯೋಚನೆಯಲ್ಲಿ ಪೊಲೀಸರಿದ್ದಾರೆ.

ಆದ್ರೆ ದೀಪಕ ಮನೆಯವರು ಪುಷ್ಪಾ ಪಟದಾರಿ ಕುಟುಂಬಕ್ಕೆ ಸೇರಿದವಳು ಎಲ್ಲ ದಾಖಲೆಗಳಲ್ಲಿ ಆಕೆಯ ಹೆಸರು ಪುಷ್ಪಾ ಪಟದಾರಿ ಅಂತಾ ಇರೋ ಕಾರಣ ಅಂತ್ಯಸಂಸ್ಕಾರ ಮಾಡಲು ಶವವನ್ನು ನಮಗೆ ಕೊಡಬೇಕು ಅಂತಾ ಪಟ್ಟು ಹಿಡಿದಿದ್ದಾರೆ.

ಸದ್ಯ ಪುಷ್ಪಾ ಸಾವಿನ ಮರಣೋತ್ತರ ಪರೀಕ್ಷೆ ನಂತರ ಶವ ಹಸ್ತಾಂತರ ವಿಚಾರಕ್ಕೆ ಸಂಬಂಧಿಸಿದ ಹಾಗೆ ಪೊಲೀಸರಿಗೆ ಶವವನ್ನು ಯಾರಿಗೆ ಹಸ್ತಾಂತರ ಮಾಡಬೇಕು ಎಂಬ ಗೊಂದಲದಲ್ಲಿದ್ದು,ಶವ ಯಾರ ಕೈ ಸೇರಲಿದೆ ಎಂದು ಕಾದು ನೋಡಬೇಕಿದೆ.

ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

29/09/2022 12:34 pm

Cinque Terre

83.94 K

Cinque Terre

2

ಸಂಬಂಧಿತ ಸುದ್ದಿ