ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆತ್ಮ ನಿರ್ಭರ್ ಮೂಲಕ ಸಾಧನೆ ಮಾಡಿದ ಅಂಕುಶ ಕೊರವಿ; ಸೇನೆ ಸೇರಲಿದೆ ಸ್ವದೇಶಿ ಪಿಸ್ತೂಲ್

ವಾಣಿಜ್ಯನಗರಿ ಹುಬ್ಬಳ್ಳಿಯ ಹೆಸರು ದೇಶ ವಿದೇಶದಲ್ಲಿ ಕೂಡ ಸಾಕಷ್ಟು ಸದ್ದನ್ನು ಮಾಡಿರುವ ನಗರ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಧಾರ್ಮಿಕ, ವೈಚಾರಿಕತೆ ಹಾಗೂ ವಿವಿಧ ರಂಗದಲ್ಲಿ ಕೂಡ ಹುಬ್ಬಳ್ಳಿಯ ಹೆಸರು ಅಜರಾಮರ. ಈ ಹುಬ್ಬಳ್ಳಿಯ ಹೆಸರನ್ನು ಭಾರತೀಯ ಸೇನೆಯಲ್ಲಿ ಅಚ್ಚಳಿಯದಂತೆ ಉಳಿಸಲು ಇಲ್ಲೊಬ್ಬ ಸಾಧಕ ಶ್ರಮಿಸುತ್ತಿದ್ದಾನೆ. ಅಷ್ಟಕ್ಕೂ ಯಾರು ಸಾಧಕ ಯುವಕ? ಆತ ಮಾಡುತ್ತಿರುವುದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..

ಹುಬ್ಬಳ್ಳಿಯ ಯುವಕ ಅಂಕುಶ ಕೊರವಿ ಅಸ್ತ್ರ ಡಿಫೆನ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಸ್ವದೇಶಿ ಪಿಸ್ತೂಲ್ ಅಭಿವೃದ್ಧಿ ಪಡಿಸುತ್ತಿದ್ದಾರೆ. ಹೌದು.. ಆತ್ಮ ನಿರ್ಭರ್ ಭಾರತದ ಮೊದಲ ಸ್ವದೇಶಿ ಪಿಸ್ತೂಲ್ ನ್ನು ಹುಬ್ಬಳ್ಳಿಯಲ್ಲಿ ಅಭಿವೃದ್ಧಿ ಪಡಿಸುವ ಮೂಲಕ ಭಾರತೀಯ ಸೇನೆಗೆ, ರಾಷ್ಟ್ರದ ಸಶಸ್ತ್ರ ಪಡೆಗಳ ಹಾಗೂ ಪೊಲೀಸ್ ಇಲಾಖೆಗೆ ತಾವೇ ಸಂಶೋಧನೆ ಮಾಡಿರುವ ವಿವಿಧ ಶಸ್ತ್ರಗಳನ್ನು ಒದಗಿಸುವ ಕನಸನ್ನು ಕಟ್ಟಿಕೊಂಡಿದ್ದಾರೆ. ಈಗಾಗಲೇ ಭಾರತೀಯ ಸೇನೆಯಲ್ಲಿ ಹಳೆಯ ಕಾಲದ ಪಿಸ್ತೂಲ್ ಬಳಕೆಯಲ್ಲಿದ್ದು, ಈಗ ಹೊಸ‌ ತಂತ್ರಜ್ಞಾನದ ಸ್ವದೇಶಿ ಪಿಸ್ತೂಲ್ ಒದಗಿಸುವ ಕನಸನ್ನು ಕಂಡಿದ್ದಾರೆ. ಅಟಲ್ ಎಂಬ ಹೆಸರಿನಲ್ಲಿ ಡಿಫೆನ್ಸ್‌ ಸ್ಟಾರ್ಟ್ ಅಪ್ ಕಂಪನಿಯ ಮೂಲಕ ಅಸ್ತ್ರಗಳನ್ನು ಸಿದ್ಧಪಡಿಸುತ್ತಿದ್ದು, ಭಾರತೀಯ ಸೇನೆಯನ್ನು ಬಲಪಡಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ.

ಇನ್ನೂ ಅಟಲ್ ಪಿಸ್ತೂಲ್ ಆವಿಷ್ಕಾರ ಪರಿಸ್ಥಿತಿಗೆ ಅನುಸಾರವಾಗಿ ಫೈರ್ ಕಂಟ್ರೋಲ್ ಹೊಂದಿದೆ. ಅಲ್ಲದೇ ಸಾಕಷ್ಟು ಅಧುನಿಕ ತಂತ್ರಜ್ಞಾನದ ಬಳಕೆಯಿಂದ ಹೊಸ ಹೊಸ ಆವಿಷ್ಕಾರದಿಂದ ಹುಬ್ಬಳ್ಳಿಯ ಯುವಕ ಇಂತಹದೊಂದು ಸಾಧನೆಗೆ ಮುಂದಾಗಿದ್ದಾನೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗಲೇ ಇಂತಹದೊಂದು ಕಾರ್ಯಕ್ಕೆ ಮುಂದಾಗಿರುವ ಅಂಕುಶ ಈಗ ಭಾರತೀಯ ಸೇನೆಗೆ ಹಾಗೂ ಸಶಸ್ತ್ರ ಪಡೆಗಳ ಶಕ್ತಿಯನ್ನು ವೃದ್ಧಿಸುವ ಸದುದ್ದೇಶದಿಂದ ಇಂತಹದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ.

ಒಟ್ಟಿನಲ್ಲಿ ಹುಬ್ಬಳ್ಳಿಯ ಸಾಧಕನ ಪರಿಶ್ರಮ ಮುಂದಿನ ದಿನಗಳಲ್ಲಿ ಸೇನೆಯ ಬತ್ತಳಿಕೆಯನ್ನು ಸೇರುವುದು ನಿಜಕ್ಕೂ ವಿಶೇಷವಾಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸುವ ಮೂಲಕ ಸೇನೆ ಬಲವನ್ನು ವೃದ್ಧಿಸಲು ಶ್ರಮಿಸುತ್ತಿರುವ ಸಾಧಕನಿಗೆ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗಿದೆ.

ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/09/2022 04:08 pm

Cinque Terre

74.56 K

Cinque Terre

18

ಸಂಬಂಧಿತ ಸುದ್ದಿ