ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರೈತನ ಗೋಳು ಕೇಳುವವರು ಯಾರು...?

ಇವರೆಲ್ಲ ದೇಶಕ್ಕೆ ಅನ್ನ ಹಾಕೊ ಕರುಣಾಮಯಿಗಳು, ಆದ್ರೆ ಸರ್ಕಾರ ಮಾತ್ರ ದೇಶದ ಬೆನ್ನೆಲುಬು ಎನ್ನುವ ರೈತರಿಗೆ ಮಲತಾಯಿ ಧೋರಣೆ ಮಾಡುತ್ತಿದೆಂದು ರೈತರು ಸರ್ಕಾರದ ವಿರುದ್ಧ ಗಿಡಿ ಕಾರುತ್ತಿದ್ದಾರೆ.

ಹೌದು ಹೀಗೆ ಹೆಗಲ ಮೇಲೆ ಹಸಿರು ಟಾವಲ್ ಹಾಕಿಕೊಂಡು ನಾವು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ಕೊಡಿ, ಪರಿಹಾರ ಒದಗಿಸಿ ಎಂದು ಸರ್ಕಾರದ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.

ರೈತರ ವಿವಿಧ ಬೇಡಿಕೆಗಳಾದ ಭೂಸ್ವಾಧೀನ ಕಾಯ್ದೆ ಮತ್ತು ಭೂ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ ಹಿಂಪಡೆಯಬೇಕು. ರೈತರ ಕೃಷಿ ಕಾರ್ಮಿಕರ ಸ್ತ್ರೀ ಶಕ್ತಿ ಕೃಷಿ ರಾಷ್ಟ್ರೀಕೃತ ಸಾಲ ಮನ್ನಾ ಮಾಡಬೇಕು. ನೈಸರ್ಗಿಕ ವಿಪತ್ತುಗಳಿಗೆ ತುತ್ತಾಗಿರುವ ರೈತರಿಗೆ ಸಕಾಲಕ್ಕೆ ಪರಿಹಾರ ಒದಗಿಸಬೇಕು. ಮುಂಗಾರು ಹಾಗೂ ಹಿಂಗಾರಿ ಬೆಳೆ ವಿಮೆಗಳನ್ನು ಜಾರಿಗೆ ಬರುವಂತೆ ಮಂಜೂರು ಮಾಡಬೇಕು. ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಬೇಕು ಇಷ್ಟೆಲ್ಲಾ ಸಮಸ್ಯೆಗಳನ್ನ ರೈತರು ಅನುಭವಿಸುತ್ತಿದ್ದರು ಸರ್ಕಾರ ಮಾತ್ರ ಜಾಣ ಕುರುಡನಂತೆ ವರ್ತನೆ ಮಾಡುತ್ತಿದೆ. ಕೂಡಲೆ ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಈ ರೈತ ತಾನು ಜಮೀನುನಲ್ಲಿ ಕಷ್ಟ ಪಟ್ಟು ಉಳಿಮೆ ಮಾಡಿ ಬೆಳೆ ಬೆಳದಿರುತ್ತಾನೆ. ಆದ್ರೆ ಸರ್ಕಾರ ಮಾತ್ರ ಸೂಕ್ತ ಬೆಲೆ ನೀಡದೆ ಅದೆಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ಬೇಡಿಕೆ ಈಡೇರಿಸದಿದ್ದರೆ ಇದೆ ತಿಂಗಳು ಕೊನೆಗೆ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಉಗ್ರವಾದ ಹೋರಾಟ ಮಾಡಲಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/09/2022 02:53 pm

Cinque Terre

37.41 K

Cinque Terre

0

ಸಂಬಂಧಿತ ಸುದ್ದಿ