ರಾಜ್ಯದ ಹಲವೆಡೆ ಎನ್ಐಎ ದಾಳಿ ಹಿನ್ನೆಲೆ ಧಾರವಾಡದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಪಿಎಫ್‌ಐ ಬ್ಯಾನ್ ಮಾಡಬೇಕು ಅಂತ ಹೋರಾಟ ಮಾಡುತ್ತಾ ಬಂದಿದ್ದೇವೆ. ಗಲಭೆ, ಕೊಲೆಗಳಲ್ಲಿ ಪಿಎಫ್‌ಐ, ಎಸ್‌ಡಿಪಿಐ ಭಾಗಿಯಾಗಿದ್ದರ ಬಗ್ಗೆ ಸಾಕ್ಷಿ ಇವೆ ಎಂದು ಸಂಘಟನೆಗಳ ವಿರುದ್ಧ ಹರಿಹಾಯ್ದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರಕ್ಕೆ ಮಾಹಿತಿ ಇದೆ. ಈ ಸಂಘಟನೆಗಳನ್ನು ಬ್ಯಾನ್ ಮಾಡಲು ಮೀನಾಮೇಷ ಮಾಡುತ್ತಿದೆ. ಸರ್ಕಾರ ನಿನ್ನೆ ಪಿಎಫ್‌ಐ ನ ಪ್ರಮುಖರ ಕಚೇರಿ ಮೇಲೆ ಎನ್ಐಎ ದಾಳಿ ಮಾಡಿದೆ. ಅಲ್ಲಿ ದಾಖಲಾತಿಗಳು ಸಿಗುತ್ತವೆ. ಲಕ್ಷಗಟ್ಟಲೇ ಹಣ ಸೀಜ್ ಆಗಿದೆ ಅನ್ನೋದು ಗೊತ್ತಿದೆ. ನೂರಕ್ಕೆ ನೂರರಷ್ಟು ಅವರು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿಜಾಬ್, ರುದ್ರೇಶ್, ನೆಟ್ಟಾರು ಸೇರಿದಂತೆ ಹಿಂದೂ ನಾಯಕರ ಕೊಲೆಯಲ್ಲಿ ಭಾಗಿಯಾಗಿದ್ದರಿಂದ ಸಂಘಟನೆ ಹೆಸರು ಕೂಡ ಎಫ್ಐಆರ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ದಾಖಲೆಗಳು ಇದ್ರೂ ಆ ಸಂಘಟನೆಗಳನ್ನು ಬ್ಯಾನ್ ಮಾಡುತ್ತಿಲ್ಲ ಅವರ ಚಟುವಟಿಕೆಗಳನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಅವರನ್ನು ಖಾಯಂ ಆಗಿ ಜೈಲಿಗೆ ಹಾಕಬೇಕು. ಬಿಹಾರದಲ್ಲಿ ಇಬ್ಬರು ಸಿಕ್ಕಾಕಿಕೊಂಡಿದ್ದಾರೆ. ಮುಂದಿನ ಕೆಲ ವರ್ಷಗಳಲ್ಲಿ ಇಸ್ಲಾಂ ರಾಷ್ಟ್ರವನ್ನಾಗಿ ಘೋಷಣೆ ಮಾಡುತ್ತೇವೆ ಅಂತ ಹೇಳಿದ್ರು. ಕೋಟಿಗಟ್ಟಲೆ ಹಣ ವರ್ಗಾವಣೆ ಆಗಿದ್ದರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಪಿಎಫ್‌ಐ ನಿರಂತರ ಚಟುವಟಿಕೆಗಳನ್ನು ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಪಿಎಫ್ಐ ರಾಜ್ಯಾಧ್ಯಕ್ಷರ ಜೊತೆ ಸಭೆ ನಡೆದಿರುವುದು ಗೊತ್ತಿದೆ. ಇವರು ದೇಶದ್ರೋಹ ಕೆಲಸ ಮಾಡುತ್ತಾ.ರೆ ಅರೆಸ್ಟ್ ಆಗ್ತಾರೆ. ಬೇಲ್ ಮೇಲೆ ಹೊರಗಡೆ ಬರ್ತಾರೆ. ಇವರು ಸಂವಿಧಾನದ ವಿರೋಧಿ ಚಟುವಟಿಕೆ ಮಾಡುತ್ತಾರೆ. ಹೈಕೋರ್ಟ್ ವಿರುದ್ಧವೇ ಇವರು ಪ್ರತಿಭಟನೆ ಮಾಡಿದರು. ಖುರಾನ್ ಆಧಾರದ ಮೇಲೆ ಈ ಸಂಘಟನೆಗಳು ಇಸ್ಲಾಂಮಿ ಕಡೆ ಹೊರಟಿದ್ದಾರೆ. ಈ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಬೇಕು. ನಾನು ಈ ಕುರಿತು ಆಂದೋಲನ ಆರಂಭ ಮಾಡುತ್ತೇನೆ ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/09/2022 03:39 pm