ಜೈಂಟ್ಸ್ ಗ್ರೂಪ್ ಹುಬ್ಬಳ್ಳಿ ಶಹರ ಮತ್ತು ಜೈಂಟ್ಸ್ ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರು ಹಾಗೂ ಸಮಾಜ ಸೇವಕರಾದ ಡಾ.ವಿ.ಎಸ್.ವಿ ಪ್ರಸಾದ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಜೈಂಟ್ಸ್ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಜೈಂಟ್ಸ್ ಸಪ್ತಾಹವನ್ನು ಆಯೋಜಿಸಿದ್ದು,ಸುಮಾರು 75 ಸಸಿಗಳನ್ನು ನೆಡಲಾಯಿತು. ಈ ಮೊದಲೇ 400 ಗಿಡಗಳನ್ನು ಶಾಲೆಯ ಜಾಗದಲ್ಲಿ ಈಗಾಗಲೇ ನೆಡಲಾಗಿದೆ.ಇನ್ನೂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಮಕ್ಕಳು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು ಸಸ್ಯವನ್ನು ಬೆಳೆಸಿ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಸಿಎ ಎಂ.ಕೆ.ಬಾಬಜಿ ವಹಿಸಿದ್ದರು. ಮೊದಲಿಗೆ ಜಿ.ಎಸ್. ನಾಯಕ ಅವರು ಸರ್ವರನ್ನು ಸ್ವಾಗತಿಸಿದರು. ಸಾದಿಕಾ ಅಮರೀನ್ ಧನ್ಯವಾದ ಅರ್ಪಣೆ ಮಾಡಿದರು. ಕಾರ್ಯಕ್ರಮವನ್ನು ವಾಸುದೇವ್ ಮಹಾಲೆ ನಿರ್ವಹಿಸಿದರು. ಜೈಂಟ್ಸ್ ಗ್ರೂಪಿನ ಮಾಜಿ ಅಧ್ಯಕ್ಷ ಜಿ.ಎಸ್.ನಾಯಕ್, ವಾಸುದೇವ ಮಹಾಲೆ, ನಿಯೋಜಿತ ಅಧ್ಯಕ್ಷ ಡಾ. ಮನೋಜ್ ಭಟ್, ಕಾರ್ಯದರ್ಶಿ ವಸಂತ ನಾಯಕ್ ಖಜಾಂಚಿ ಅಂಬೇಶ ಊಟವಾಲೆ ನಿರ್ದೇಶಕ ಪ್ರವೀಣ್ ನಾಗರಕಟ್ಟೆ, ಪ್ರವೀಣ್ ಮುತಾಲಿಕ್, ಸಾದಿಕಾ ಅಮರೀನ್, ಅಶೋಕ್ ವಕ್ಕುಂದ, ಎಂ.ಬಿ. ಪಾವಟೆ, ಸುರಜಿತ್ ಕಲ್ಬುರ್ಗಿ ಮುಂತಾದವರು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/09/2022 03:22 pm