ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್.ಟಿ.ಓ ಹಾಗೂ ಪೊಲೀಸ್ ಇಲಾಖೆಯ ಜೊತೆ ಆಟೋ ರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ, ಹು-ಧಾ ಅವಳಿ ನಗರದ ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಪದಾಧಿಕಾರಿಗಳನ್ನು ಕರೆಯದೇ ಏಕಾಏಕಿ 30 ರೂಪಾಯಿ ದರ ನಿಗದಿ ಮಾಡಿದ್ದು ಖಂಡನೀಯ, ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ನಗರ ದ ತಹಶೀಲ್ದಾರ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿದರು.
ಧಾರವಾಡ ನಗರದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳು ಇದ್ದು , ಸಿ.ಎನ್.ಜಿ ಬಂಕ್ ಗಳನ್ನು ನಿರ್ಮಿಸಬೇಕು, ಅವಳಿನಗರದಲ್ಲಿ ಸುಮಾರು 400 ಕ್ಕೂ ಹೆಚ್ಚು ಆಟೋ ನಿಲ್ದಾಣಗಳನ್ನು ನಿರ್ಮಿಸಬೇಕು. ಆಟೋ ರಿಕ್ಷಾ ಫರಮೀಟ್ ಒಂದು ತಿಂಗಳು ತಡವಾದರೇ ಪ್ರತಿ ತಿಂಗಳಿಗೆ 50 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಅದನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯ ಮಾಡಿದರು.
Kshetra Samachara
12/09/2022 03:11 pm