ಹುಬ್ಬಳ್ಳಿ: ಸಾಮಾನ್ಯ ಎಲ್ಲಾ ಅಡುಗೆಗೆ ಕೊತ್ತಂಬರಿ ಬೇಕೆ ಬೇಕು. ಆದರೆ ಈ ವಿಡಿಯೋ ನೋಡಿದರೆ ಕೋತಂಬರಿ ಪ್ರಿಯರು ಶಾಕ್ ಆಗುವುದಂತೂ ಗ್ಯಾಂರಂಟಿ..
ಹೌದು. ಇಲ್ಲೊಬ್ಬ ಮಹಾನುಭಾವ ಕೊತ್ತಂಬರಿಯನ್ನು ಗಟಾರ ನೀರಿನಲ್ಲಿ ತೊಳೆಯುವದನ್ನು ರಾಕೇಶ ಎಂಬ ಯುವಕ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ವೈರಲ್ ಮಾಡಿದ್ದಾನೆ.
ನೇಕಾರ ನಗರದ ಬಳಿಯ ಈಶ್ವರ ನಗರ ಬ್ರಿಡ್ಜ್ ಬಳಿ ಯುವಕನೊಬ್ಬ ರೈತರಿಂದ ಖರೀದಿ ಮಾಡಿ ತಂದ ಕೊತ್ತಂಬರಿ ಸೊಪ್ಪನ್ನು ಗಟಾರದ ಕೊಳಚೆ ನೀರಿನಲ್ಲಿ ತೊಳೆಯುವದನ್ನು ಪ್ರಶ್ನಿಸಿದ್ದಾನೆ. ಕೋತಂಬರಿ ಅನ್ನು ಸ್ವಚ್ಛವಾದ ನೀರಿನಲ್ಲಿ ತೊಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಬದಲು ಚರಂಡಿ ನೀರಲ್ಲಿ ತೊಳೆದುಕೊಂಡು ಅದನ್ನೇ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಂತ ವಿಡಿಯೋ ಒಂದನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.ನಾವು ತಿನ್ನುವ ಕೊತ್ತಂಬರಿ ಇಷ್ಟು ಸ್ವಚ್ಛ ನೀರಿನಲ್ಲಿ ಬರುತ್ತಾ ಅಂತಾ ಶಾಕ್ ಕೂಡಾ ಆಗತ್ತೆ.
Kshetra Samachara
14/10/2020 05:52 pm