ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರಾಹುಲ್ ಗಾಂಧಿ ಪ್ರವಾಸ ಮಾಡಿದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತೆ: ಶೆಟ್ಟರ್

ನವಲಗುಂದ : ನವಲಗುಂದ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜನ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೆ ಅಲ್ಲಲ್ಲಿ ಕಾಂಗ್ರೆಸ್ ಪಾರ್ಟಿ ಮನೆಗೆ ಹೋಗಿದೆ ಅಂತ ವ್ಯಂಗ್ಯ ಮಾಡಿದರು.

ಭಾರತೀಯ ಜನತಾ ಪಾರ್ಟಿ ಹೇಳಿದಂತೆ ನಡೆದುಕೊಳ್ಳುತ್ತೇ, ಬೊಮ್ಮಯಿ ಮುಖ್ಯಮಂತ್ರಿ ಇದ್ದಾರೆ, ಮಹದಾಯಿ ಹೋರಾಟದಲ್ಲಿ ಅವರು ಪಾಲುದಾರರಿದ್ದಾರೆ. ಬೊಮ್ಮಯಿ, ಯಡಿಯೂರಪ್ಪ, ಪ್ರಲ್ಹಾದ ಜೋಶಿ ಅವರು ಸಿಕ್ಕಾಗ ಮಹದಾಯಿ ಕಳಸಾ ಬಂಡೂರಿ ಯೋಜನೆ ನಮ್ಮ ಕಾಲದಲ್ಲೇ ಅನುಷ್ಠಾನ ಆಗಲೆಬೇಕು ಅಂತಾ ನಾನು ಹೇಳ್ತಾ ಇರ್ತೇನೆ. ಕಾಂಗ್ರೆಸ್ ನವರು ಎಷ್ಟೇ ಪಾದಯಾತ್ರೆ ಮಾಡಿದರೂ ಸಹ ಅವರು ಉದ್ದಾರ ಆಗೋಕೆ ಸಾಧ್ಯನೆ ಇಲ್ಲಾ. ರಾಹುಲ್ ಗಾಂಧಿ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೆ ಅಲ್ಲಲ್ಲಿ ಕಾಂಗ್ರೆಸ್ ಪಾರ್ಟಿ ಮನೆಗೆ ಹೋಗಿದೆ. ಅವರು ಕರ್ನಾಟಕದಲ್ಲಿ ಎಷ್ಟು ದಿನ ಹಾಗೂ ಎಷ್ಟು ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡ್ತಾರೆ ಅಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತೆ ಎಂದರು.

Edited By : PublicNext Desk
Kshetra Samachara

Kshetra Samachara

13/10/2022 08:27 am

Cinque Terre

20.57 K

Cinque Terre

3

ಸಂಬಂಧಿತ ಸುದ್ದಿ