ಹುಬ್ಬಳ್ಳಿ: ಮಳೆ ಬಂತೆಂದರೆ ಸಾಕು ಈ ಹಳೇ ಹುಬ್ಬಳ್ಳಿ ಭಾಗದಲ್ಲಿ ಸುಮಾರು ವರ್ಷಗಳಿಂದ ನಾಲಾ ತುಂಬಿ ಹರಿಯುವುದು ಮಾಮೂಲಿ. ನಮ್ಮ ಕ್ಷೇತ್ರಕ್ಕೆ ಈ ಸರ್ಕಾರ ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ಮಾಡುತ್ತಿದೆಂದು ಶಾಸಕ ಪ್ರಸಾದ ಅಬ್ಬಯ್ಯ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಳೆ ಅವಾಂತರಕ್ಕೆ ತೊಂದರೆಯಾದ ತಮ್ಮದೆ ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾಲಾ ಹೂಳು ಎತ್ತುವಂತ ಕೆಲಸ ಮಾಡಬೇಕೆಂದು ಎರಡು ಮೀಟಿಂಗ್ ಮಾಡಿದ್ರು ಕೂಡ ಸರ್ಕಾರ ಮತ್ತು ಪಾಲಿಕೆ ಅಧಿಕಾರಿಗಳು ಕಿವಿ ಕೊಡುತ್ತಿಲ್ಲ. ಒಂದು ಪ್ರಾಜೆಕ್ಟ್ ನಲ್ಲಿ ನಮ್ಮ ಕ್ಷೇತ್ರಕ್ಕೆ ಬಂದ 110 ಕೋಟೆ ರೂ. ಅನುದಾನವನ್ನು ಕ್ಯಾನ್ಸಲ್ ಮಾಡಿದ್ದಾರೆ. ಈ ರೀತಿ ನಮ್ಮ ಕ್ಷೇತ್ರಕ್ಕೆ ಮಲತಾಯಿಧೋರಣೆ ಮಾಡುತ್ತಿದೆ ಈ ಸರ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Kshetra Samachara
11/10/2022 09:30 pm