ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲಾಕ್ ಮೇಲ್ ಮಾಡ್ತಿದ್ದಾರೆ: ಪೀಠದಲ್ಲಿ ಇರಲು ಯೋಗ್ಯರಲ್ಲ

ಹುಬ್ಬಳ್ಳಿ: ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡಬಾರದು. ಪಂಚಮಸಾಲಿ ಸಮುದಾಯ ಆರ್ಥಿಕವಾಗಿ ಮುಂದುವರೆದ ಸಮಾಜ. ವೀರಶೈವ ಸಮಾಜದ ಒಂದು ಪಂಗಡ. ಪಂಚಮಸಾಲಿ ಸಮುದಾಯವನ್ನ ಪ್ರತ್ಯೇಕ ಜಾತಿ ಎಂದು ಪರಿಗಣಿಸಲು ಆಗುವುದಿಲ್ಲ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುವುದನ್ನ ನಿಲ್ಲಿಸಬೇಕು ಎಂದು ವಿ.ಪ ಮಾಜಿ ಸದಸ್ಯ ಕೆ.ಸಿ‌.ಪುಟ್ಟಸಿದ್ಧಶೆಟ್ಟಿ ಹೇಳಿದರು.

ಪಂಚಮಸಾಲಿ ಸಮಾಜದಿಂದ 2 ಎ ಮೀಸಲಾತಿ ಹೋರಾಟ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬಸವ ತತ್ವದ ವಿರುದ್ಧ ಕಾಯಕ ಸಮಾಜವನ್ನು ಅವಮಾನಿಸುವ ಕೆಲಸ ಮಾಡಬಾರದು. ಬಸವಣ್ಣನವರ ಹೆಸರಿನ ಪೀಠದಲ್ಲಿ ಇವರು ಇರಲು ಯೋಗ್ಯರಲ್ಲ. ಇವರ ವರ್ತನೆ ಸ್ವಾಮೀಜಿಗಳ ರೀತಿ ಇಲ್ಲ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಹರಿಹಾಯ್ದರು.

ಶಾಸಕ ಯತ್ನಾಳ್ ಮತ್ತು ಬಿ.ಸಿ ಪಾಟೀಲ್ ಒಂದು ಜಾತಿಯ ಪರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಕಾಯಕ‌ ಸಮಾಜಗಳ ಒಕ್ಕೂಟದಿಂದ ಈ ವಿಚಾರವಾಗಿ ಚಿಂತನ ಮಂತನ ಆಯೋಜನೆ ಮಾಡಲಾಗಿದೆ. ಈ ಬಗ್ಗೆ ಕಾಯಕ ಸಮಾಜಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ ನಡೆಸಲಿದ್ದೇವೆ.‌ ಹುಬ್ಬಳ್ಳಿಯಲ್ಲಿ ಅಕ್ಟೋಬರ್ 15 ರಂದು ಸಭೆ ಆಯೋಜನೆ ಮಾಡಲಾಗಿದೆ.‌ ಪಂಚಮಸಾಲಿ ಸಮಾಜವನ್ನ 2ಎ ಗೆ ಸೇರಿಸಬಾರದು ಎಂದು ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಿದ್ದೇವೆ ಎಂದು ಅವರು ಹೇಳಿದರು.

ಇನ್ನೂ ಹುಬ್ಬಳ್ಳಿಯಲ್ಲಿ ಕಾಯಕ ಸಮಾಜಗಳಾದ ಹಡಪದ ಅಪ್ಪಣ್ಣ ಸಮಾಜ, ಗಾಣಿಗ, ಅಂಬಿಗ ವಿಶ್ವಕರ್ಮ ಸೇರಿದಂತೆ ವಿವಿಧ ಸಮಾಜದ ಮುಖಂಡರಿಂದ ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

10/10/2022 05:20 pm

Cinque Terre

278.1 K

Cinque Terre

22

ಸಂಬಂಧಿತ ಸುದ್ದಿ