ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮನೆಯನ್ನೇ ಉದ್ಯಾನ ಮಾಡಿ ಮಾದರಿಯಾದ ಮಾನಿನಿ ಮೈತ್ರಾ

ಹುಬ್ಬಳ್ಳಿ: ಬೆಳಗ್ಗೆ ಆದರೆ ಸಾಕು ಜನರು ಶುದ್ಧವಾದ ಗಾಳಿ ತೆಗೆದುಕೊಳ್ಳಬೇಕೆಂದು ಸಿಟಿಯಲ್ಲಿ ಹಸಿರು ಇರೋ ಗಾರ್ಡನ್ ಹುಡುಕಿ ಉದ್ಯಾನವನದಲ್ಲೇ ವಾಕಿಂಗ್ ಮಾಡೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಗೃಹಿಣಿ ಮನೆಯಲ್ಲಿ ಗಾರ್ಡನ್ ಮಾಡಿ ಪರಿಸರಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಹೀಗೆ ವೇಸ್ಟ್ ವಸ್ತುಗಳನ್ನು ತೆಗೆದುಕೊಂಡು, ಅವುಗಳಿಗೆ ಪೇಂಟಿಂಗ್ ಮಾಡಿ ಸಸಿಗಳನ್ನು ಹಚ್ಚಿ ಚಿಕ್ಕದಾಗಿ ಸುಂದರ ಗಾರ್ಡನ್ ಮಾಡಿದ್ದು, ನಗರದ ವಿದ್ಯಾನಗರದ ತಿಮ್ಮಾಸಗರ ರಸ್ತೆಯ ಮುಕ್ತಾ ಅಪಾರ್ಟ್ಮೆಂಟ್‌ನ ನಿವಾಸಿ ಮೈತ್ರಾ ವಿ. ಪರಿಸರದ ಮೇಲೆ ವಿಶೇಷ ಕಾಳಜಿ ಹೊಂದಿರೋ ಇವರು, ತಮ್ಮ ಮನೆಯಲ್ಲಿ ತರಹೇವಾರಿ ಸಸಿಗಳನ್ನು ಬೆಳೆಸಿದ್ದಾರೆ.

ಇವರ ಮನೆಯಲ್ಲಿ ಎಲ್ಲಿ ನೋಡಿದರಲ್ಲಿ ಸಸಿ ತುಂಬಿರುವ ಪಾಟ್‌ಗಳೆ ಕಾಣುತ್ತವೆ. ಮನೆಯ ಮುಂದೆ, ಗೋಡೆಯ ಮೇಲೆ, ಮೆಟ್ಟಿಲುಗಳ ಮೇಲೆ ಸಸಿಗಳು ಕಾಣುತ್ತೆ. ಇವರ ಮನೆಗೆ ಕಾಲಿಟ್ಟರೆ ಸಾಕು ಯಾವುದೇ ಒಂದು ತೋಟಕ್ಕೆ ಬಂದಂತೆ ಬಾಸವಾಗುತ್ತೆ. ಈ ಹಸಿರು ಸಸ್ಯಗಳಿಂದಲೇ ಮನೆಯೂ ಕೂಡ ಸುಂದರವಾಗಿ ಕಂಗೋಳಿಸುತ್ತಿದೆ.

ಇನ್ನು ಮೈತ್ರಾ ಅವರು ವಿಶೇಷವಾಗಿ ಮನಿ ಪ್ಲಾಂಟ್, ಸ್ನೇಕ್ ಪ್ಲಾಂಟ್, ಜಪಾನಿಸ್ ಫರ್ಮ್, ಇಂಡೋರ್ ಪ್ಲಾಂಟ್​ಗಳನ್ನು ಹಾಕಿದ್ದರಿಂದ ಈ ಗಿಡಗಳು ಉತ್ತಮವಾದ ಆಕ್ಸಿಜನ್ ನೀಡುವ ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲದೆ ಪಕ್ಷಿಗಳಿಗಾಗಿ ಕೃತಕ ಗೂಡುಗಳನ್ನು ಮಾಡಿಯು ಪಕ್ಷಿಗಳ ಆರೈಕೆ ಮಾಡುತ್ತಿದ್ದಾರೆ. ಮನೆಯಲ್ಲಿನ ಕಸವನ್ನು ಹೊರಗೆ ಹಾಕದೇ ಹಸಿ ಕಸವನ್ನು ಕಾಂಪೋಸ್ಟ್ ಮಾಡಿ, ಪ್ಲಾಸ್ಟಿಕ್ ಹಾಗೂ ಒಣಕಸವನ್ನು ಸುಟ್ಟು ಅದನ್ನು ಪ್ರಕೃತಿಗೆ ಹಾನಿಯಾಗದಂತೆ ಬಳಸುತ್ತಿದ್ದಾರೆ.

ಒಟ್ಟಾರೆ ಮೈತ್ರಾ ವಿ ಅವರು ಮನುಷ್ಯನಿಗೆ ಅತ್ಯವಶ್ಯಕವಾಗಿರುವ ಆಕ್ಸಿಜನ್ ಪ್ಲಾಂಟ್​ಗಳು ಸೇರಿದಂತೆ ತರಹೇವಾರಿ ಗಿಡ ಮರಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಣೆ ಮಾಡುತ್ತಿದ್ದಾರೆ. ಅವರ ಈ ಹವ್ಯಾಸಕ್ಕೆ ಅವರ ಅಪಾರ್ಟ್ಮೆಂಟ್ ದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

09/10/2022 02:29 pm

Cinque Terre

94.24 K

Cinque Terre

4

ಸಂಬಂಧಿತ ಸುದ್ದಿ