ಕಾಂಗ್ರೆಸ್‌ನವರಿಗೆ ಈವರೆಗೆ ಬುದ್ಧಿ ಬಂದಿಲ್ಲ. ಈ ರೀತಿ ಚಿಲ್ಲರೆ ರಾಜಕಾರಣ ಮಾಡಿದರೇ ಜನರು ಮೆಚ್ಚುವುದಿಲ್ಲ. ಕೆಂಪಣ್ಣವರ ಅವರು ಪತ್ರ ಬರೆದಿದ್ದನ್ನು ಆಧಾರವಾಗಿ ಇಟ್ಟುಕೊಂಡು 40% ಕಮಿಷನ್ ಕುರಿತಾಗಿ ಪೇಸಿಎಂ ಅನ್ನು ಜನರು ನಂಬೋದಿಲ್ಲ. ಈ ಮೂಲಕ ಮೂರ್ಖರನ್ನಾಗಿ ಮಾಡೋದಕ್ಕೆ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಕಾಂಗ್ರೆಸ್‌ನವರು ಸಂವಿಧಾನ ಬಗ್ಗೆ ಮಾತನಾಡುತ್ತಾರೆ. ಆದರೆ ಸಂವಿಧಾನ ಬದ್ಧವಾದ ಸಂಸ್ಥೆಗಳಿಗೆ ಅಪಮಾನ ಮಾಡುವುದು ಸಂವಿಧಾನಕ್ಕೆ ಮಾಡಿದ ಅಪಮಾನ. ಕಾಂಗ್ರೆಸ್ ನವರು ಅಧಿಕಾರದ ಹಿಂದೆ ಓಡಿಹೋದವರು. ಬಿಜೆಪಿ ವಾಜಪೇಯಿ ಕಾಲದಲ್ಲಿ ಎಂಟು ವರ್ಷಗಳಿಂದ ಅಧಿಕಾರ ಮಾಡಿದೆ. ಉಳಿದ ಸಮಯ ಕಾಂಗ್ರೆಸ್‌ನವರೇ ಆಡಳಿತ ಮಾಡಿದ್ದಾರೆ. ಆಗ ಇ.ಡಿ, ಸಿಬಿಐ ದುರುಪಯೋಗ ಮಾಡಿಕೊಂಡಿರುವ ಆರೋಪ ಬಂದಿರಲಿಲ್ಲವೇ? ಆದರೆ ಇದೀಗ ಇ,ಡಿ, ಸಿಬಿಐಗಳನ್ನು ದೂರುವುದು ಎಷ್ಟು ಸರಿ? ಈ ಮೂಲಕ ಕಾಂಗ್ರೆಸ್ ಸಂವಿಧಾನಕ್ಕೆ ಮಹತ್ವ ಕೊಡುತ್ತಿಲ್ಲ ಎಂಬುದು ರುಜುವಾತು ಆಗುತ್ತಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/10/2022 08:54 pm